ಭಟ್ಕಳ (Bhatkal crime) : ಸ್ಮಶಾನದ ಹತ್ತಿರ ಜೂಜಾಡುತ್ತಿದ್ದಾಗ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ, ೮ ಜನರನ್ನು ವಶಕ್ಕೆ ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ತಾಲೂಕಿನ ತಲಾಂದ ಗ್ರಾಮದ ಸ್ಮಶಾನ ಹತ್ತಿರ ಇರುವ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ನಿನ್ನೆ ಸೆ.೨೬ರಂದು ರಾತ್ರಿ ೧೧.೨೦ರ ಸುಮಾರಿಗೆ ಈ ದಾಳಿ ನಡೆದಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ (Bhatkal crime)
ಇದನ್ನೂ ಓದಿ : ಆನಂದಾಶ್ರಮ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಜಗದೀಶ ಮಾಸ್ತಪ್ಪ ನಾಯ್ಕ (೩೩), ವಸಂತ ಮಾಸ್ತಪ್ಪ ನಾಯ್ಕ (೩೫), ಅರುಣ ಮಂಜುನಾಥ ನಾಯ್ಕ (೨೯), ಮಾದೇವ ನಾಗಪ್ಪ ನಾಯ್ಕ (೫೦), ವಿನೋದ ಮಂಜಯ್ಯ ನಾಯ್ಕ (೪೦), ದೇವೇಂದ್ರ ಸೋಮಯ್ಯ ಗೊಂಡ (೩೦), ಶ್ರೀನಿವಾಸ ನಾಗಪ್ಪ ನಾಯ್ಕ (೪೭) ಮತ್ತು ಕೃಷ್ಣ ಸುಕ್ರ ನಾಯ್ಕ (೪೫) ಆರೋಪಿತರು. ಇವರೆಲ್ಲರೂ ಸ್ಥಳೀಯ ತಲಾಂದ ಗ್ರಾಮದವರು.
ಇದನ್ನೂ ಓದಿ : ರಿಕ್ರಿಯೇಶನ್ ಕ್ಲಬ್ ಮೇಲೆ ದಾಳಿ; ೮ ಜನರು ವಶಕ್ಕೆ