ಭಟ್ಕಳ (Bhatkal): ಗುಂಪೊಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿದ್ದಿಕಿ ಸ್ಟ್ರೀಟ್‌ ನಿವಾಸಿ ಅಬು ಮಹ್ಮದ್ ಅಬ್ದುಲ್ ರಜಾಕ್, ಮೂಸಾ ನಗರದ ಫುರ್ಕಾನ್ ಫಾರೂಖ್ ಡಿ.ಎಫ್‌. ಮತ್ತು ಫಹಮಾನ್ ಫಾರೂಖ್ ಡಿ.ಎಫ್‌., ಶಾರ್ಲಿ ಸ್ಟ್ರೀಟ್‌ನ ಸಲ್ಮಾನ್, ಸೈರೋಜ್‌ ಫುರ್ಕಾನ್‌ ಹಾಗೂ ಇತರರ ವಿರುದ್ಧ ರಂಗಿನಕಟ್ಟಾದ ದುಬೈನಲ್ಲಿ ಕೆಲಸ ಮಾಡುತ್ತಿರುವ ಮಹ್ಮದ್‌ ಅಜಿಯಾದ್‌ ಚಾಮುಂಡಿ ದೂರು ದಾಖಲಿಸಿದ್ದಾರೆ. ಮಹ್ಮದ್‌ ಅಜಿಯಾದ ಚಾಮುಂಡಿ ಅವರು ತಮ್ಮ ಗೆಳೆಯನಾದ ಅಬ್ದುಲ್‌ ಹಮೀದ್‌ ಗವಾಯಿಯವರ ಅತ್ತೆಯ ಮನೆಯಲ್ಲಿದ್ದಾಗ ಆರೋಪಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಲಾಗಿದೆ. ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಬಿಡಿಸಲು ಬಂದ ಬಂದರ್‌ ರಸ್ತೆಯ ೫ನೇ ಕ್ರಾಸ್‌ ನಿವಾಸಿ ಜಿಶಾನ್‌ ಸಂಶುದ್ದೀನ್‌ ಅಲಿ ಅಕ್ಬರ್‌ ಅವರಿಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ (Complaint) ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ (Bhatkal) ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಕುಮಟಾ – ಶಿರಸಿ ರಸ್ತೆಯಲ್ಲಿ ಸಂಚಾರ ನಿಷೇಧ