ಭಟ್ಕಳ (Bhatkal) : ಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ (Mangaluru) ವೆನ್ಲಾಕ್‌ ಆಸ್ಪತ್ರೆಯಲ್ಲಿ (Wenlock hospital) ಮೃತಪಟ್ಟಿದ್ದಾನೆ. ಭಟ್ಕಳ ತಾಲೂಕಿನ ಬೆಳಕೆಯ ಕಂಚಿಕೇರಿ ನಿವಾಸಿ ಶ್ರೀಧರ ಮಾಸ್ತಪ್ಪ ನಾಯ್ಕ ಮೃತರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶ್ರೀಧರ ನಾಯ್ಕ ಅವರು ಬಿಪಿ, ಶುಗರ್‌ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ನ.೨೨ರಂದು ಮಲ್ಲಿಗೆ ಗಿಡಕ್ಕೆ (jasmine plant) ಹೊಡೆಯುವ ಕ್ರಿಮಿನಾಶಕ ಔಷಧಿ ಕುಡಿದಿದ್ದರು. ಅಸ್ವಸ್ಥರಾದ ಅವರನ್ನು ಭಟ್ಕಳ (Bhatkal) ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನ.೨೮ರಂದು ಮಧ್ಯಾಹ್ನ ೩.೩೩ರ ಸುಮಾರಿಗೆ ಮೃತಪಟ್ಟಿದ್ದಾರೆ.  ಈ ಕುರಿತು ಮೃತರ ಮಗ ಹರೀಶ ಶ್ರೀಧರ ನಾಯ್ಕ (೨೮) ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ (Case Registered) ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ರುದ್ರಭೂಮಿಯಲ್ಲಿ ಚಂಡೆ ವಾದಕರ ಶ್ರಮದಾನ