ಭಟ್ಕಳ (Bhatkal) : ಜಾಗದ ವಿಷಯದಲ್ಲಿ ಜೀವ ಬೆದರಿಕೆ ಹಾಕುತ್ತಿದ್ದ ಆರೋಪಿತರು ಗುಂಪುಕಟ್ಟಿಕೊಂಡು ಬಂದು ವೃದ್ಧ ಮೀನುಗಾರನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು, ತೊಂದರೆ ಕೊಟ್ಟಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೀನುಗಾರಿಕೆ ವೃತ್ತಿ ಮಾಡಿಕೊಂಡಿರುವ ತೆಂಗಿನಗುಂಡಿ ಹೆಬಳೆ ನಿವಾಸಿ ಕಾಸೀಮ್‌ ತಂದೆ ಅಲಿ ಬುಡ್ಡು (೭೨) ಹಲ್ಲೆಗೊಳಗಾದ ವೃದ್ಧ. ಕಿದ್ವಾಯಿ ರಸ್ತೆಯ ಶಬೀಬ್ ಕೋಲಾ, ಜಾಲಿ ರಸ್ತೆಯ  ಮೊಹಮ್ಮದ ಅಬ್ದುಲ್ಲಾ ಮುಝಾಫರ್ ಕೊಲಾ(೩೨),  ಮೊಹಮ್ಮದ ಅಬುಬಕ್ಕರ್ ಮುಝಾಫರ್ ಕೋಲಾ (೩೫), ಮೊಹಮ್ಮದ ಉಜೇರ್ ಮುಝಾಫರ್ ಕೊಲಾ ಮತ್ತು ಶವೂರ್ ಕೋಲಾ ವಿರುದ್ಧ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ :  ಭಟ್ಕಳದಲ್ಲಿ ಬೈಕ್ ಡಿಕ್ಕಿ; ಪಾದಚಾರಿ ಸಾವು

ದೂರಿನಲ್ಲಿ ತಿಳಿಸಿರುವಂತೆ ವೃದ್ಧ ಕಾಸೀಮ್‌ ಅವರಿಗೆ ತೆಂಗಿನಗುಂಡಿ ಸೆರ್ವೇ ನಂ ೭೧ರಲ್ಲಿ ಹಿಸ್ಸಾ ೩ಎ೬ ೦-೧೮-೦ (ಎ-ಗು-ಆ) ಪಿತ್ರಾರ್ಜಿತ ಜಮೀನಿದೆ. ಕಳೆದ ೫೦ ವರ್ಷಗಳಿಂದ ಅವರ ಕಬ್ಜಾದಲ್ಲಿ ಇದ್ದು, ಅದರಲ್ಲಿ  ಒಂದು ಬಂಗಲೆ ಇದೆ. ಕಳೆದ ಹಲವು ವರ್ಷಗಳಿಂದ ಆರೋಪಿತರು ಈ ಜಾಗವನ್ನು ಬಿಡುವಂತೆ ಧಮಕಿ ಹಾಕಿದ್ದಾರೆ. ಅನೇಕ ಬಾರಿ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರಲಾಗಿದೆ. ಸೆ.೧೭ರಂದು ಕಾಸೀಮ್‌, ಅವರ ತಮ್ಮ ಅಬ್ದುಲ್ ಖಾದರ ಮತ್ತು ತಮ್ಮನ ಹೆಂಡತಿ ಬೀಬಿ ಸಾರಾ ಈ ಜಮೀನು ನೋಡಲು ಹೋದಾಗ ಆರೋಪಿತರು ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Protest/ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ