ಭಟ್ಕಳ (Bhatkal news): ಗರ್ಭಿಣಿ ಕಡವೆಯೊಂದನ್ನು ಬೇಟೆಯಾಡಿ ತಲೆ ಹಾಗೂ ಹೊಟ್ಟೆಯಲ್ಲಿದ್ದ ಎರಡು ಭ್ರೂಣವನ್ನು ಸ್ಥಳದಲ್ಲಿ ಬಿಟ್ಟು ಮಾಂಸ ಸಾಗಾಟ ಮಾಡಿರುವ ಘಟನೆ ಯಲ್ವಡಿಕವೂರ ಪಂಚಾಯತ ವ್ಯಾಪ್ತಿಯ ಬೆಣಂದೂರು ಸಮೀಪ ಬೆಳಕಿಗೆ ಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೆಣ್ಣು ಗರ್ಭಿಣಿಯನ್ನು  ಬೇಟೆಯಾಡಿದ ಬಳಿಕ ಅದರ ತಲೆಯನ್ನು ಬೇರ್ಪಡಿಸಿ ನಂತರ ಹೊಟ್ಟೆಯಲ್ಲಿದ್ದ ಎರಡು ಭ್ರೂಣಗಳನ್ನು ಅಲ್ಲೇ ಎಸೆದು ಮಾಂಸವನ್ನು ಸಾಗಾಟ ಮಾಡಿಕೊಂಡು ಪರಾರಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ವೇಳೆ ದನದ ಮೇವಿಗಾಗಿ ಬಂದ ಮಹಿಯೋರ್ವಳು ಇದನ್ನು ನೋಡಿದಾಗ ಕಡವೆ ಬೇಟೆ ಘಟನೆ ಬೆಳಕಿಗೆ ಬಂದಿದೆ (Bhatkal news).

ಇದನ್ನೂ ಓದಿ :  ಹೊಸದಾಗಿ ಮರಳು ಸಾಗಾಟ ನೀತಿ ರಚನೆಗೆ ಆಗ್ರಹ

ವಿಷಯ ತಿಳಿದ ಸ್ಥಳೀಯ ನಾಗೇಂದ್ರ ನಾಯ್ಕ ಹಾಗೂ ಅಲ್ಲಿನ ಯುವಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಭಟ್ಕಳ ಅರಣ್ಯ ಇಲಾಖೆ (forest department) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : child marriage/ ಕಾರವಾರದ ಮಹಿಳೆ ಸಹಿತ ಐವರ ವಿರುದ್ಧ ಪ್ರಕರಣ