ಭಟ್ಕಳ (Bhatkal): ಅಜ್ಜಿಯ ಹಾಸಿಗೆಯಡಿಯಲ್ಲಿ ಇಟ್ಟಿದ ಚಿನ್ನಾಭರಣ ಕಳವು ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು (complaint) ಕೊಟ್ಟವನನ್ನೇ ಭಟ್ಕಳ ಪೊಲೀಸರು ಬಂಧಿಸಿದ್ದಾರೆ! ಆತ ಬೇರಾರೂ ಅಲ್ಲ, ವೃದ್ಧೆಯ ಮೊಮ್ಮಗ (grandson arrested) !!

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೌದು, ಕಳ್ಳನಂತೆ ನಟಿಸಿ ೯೨ ವರ್ಷದ  ವೃದ್ಧೆಯ ಚಿನ್ನಾಭರಣ ಕದ್ದ ಆರೋಪದ ಮೇಲೆ ಪೊಲೀಸರು ದೂರರುದಾರನನ್ನೇ ಬಂಧಿಸಿದ್ದಾರೆ. ಭಟ್ಕಳ ಪಟ್ಟಣ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನವೀನ್ ನಾಯಕ್ ನೇತೃತ್ವದ ತನಿಖೆಯ ನಂತರ, ಮಾರ್ಚ್ ೧೯ರ ಬುಧವಾರದಂದು ಅಜ್ಜಿಯ ಮೊಮ್ಮಗ ೪೬ ವರ್ಷದ ತಜಮ್ಮುಲ್ ಹಸನ್ ಅಸ್ಕೇರಿಯನ್ನು ಬಂಧಿಸಲಾಗಿದೆ (grandson arrested). ಕದ್ದ ಚಿನ್ನಾಭರಣಗಳನ್ನು ತಗೊಂಡು ಚಿನ್ನದ ವ್ಯಾಪಾರಿ ಬಳಿ ಹೋದಾಗ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : case registered/ ಹಾಸಿಗೆಯಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು

ಮಾರ್ಚ್ ೧೭ರಂದು ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಬೆಳಗಿನ ಜಾವದಲ್ಲಿ ತನ್ನ ಮನೆಗೆ ನುಗ್ಗಿ ತನ್ನ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ವೃದ್ಧೆಯ ಮೊಮ್ಮಗ ದೂರು ನೀಡಿದ್ದ. ಮನೆಯಲ್ಲಿದ್ದ ವೃದ್ಧೆ ಬೆಳಗಿನ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಮತ್ತು ಪುರುಷರು ರಂಜಾನ್ (Ramadan) ಸಮಯದಲ್ಲಿ ಬೆಳಗಿನ ಊಟವಾದ ಸೆಹ್ರಿ ನಂತರ ಪ್ರಾರ್ಥನೆಗಾಗಿ ಮಸೀದಿಗೆ ಹೋಗಿದ್ದಾಗ ಕಳ್ಳತನ ನಡೆದಿತ್ತು. ರಂಜಾನ್‌ ತಿಂಗಳಲ್ಲಿ ನಸುಕಿನ ಜಾವ ನಡೆದ ಈ ಘಟನೆ ಭಟ್ಕಳ ಪಟ್ಟಣದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು.

ಇದನ್ನೂ ಓದಿ : Judicial custody/ ಸೊಸೈಟಿಯಲ್ಲಿ ಕಳ್ಳತನ ಆರೋಪಿಗೆ ನ್ಯಾಯಾಂಗ ಬಂಧನ

ಮನೆಯಲ್ಲಿನ ಸಿಸಿಟಿವಿಯಲ್ಲಿ (CCTV) ಆರೋಪಿ ಯಾವುದೇ ಅಡೆತಡೆಯಿಲ್ಲದೆ ಕೇವಲ ನಾಲ್ಕು ನಿಮಿಷಗಳಲ್ಲಿ ಒಳಗೆ ಪ್ರವೇಶಿಸಿ ಹೊರಟುಹೋಗಿರುವುದು ಸೆರೆಯಾಗಿತ್ತು. ಮನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು ಗುರುತಿಸುವಲ್ಲಿ ಪೊಲೀಸ್ ತಂಡಕ್ಕೆ ಸಹಾಯ ಮಾಡಿದೆ. ದರೋಡೆಯ ನಂತರ, ಆರೋಪಿಯು ತನ್ನ ಅಜ್ಜಿಯ ಪರವಾಗಿ ಪೊಲೀಸರಿಗೆ ದೂರು ನೀಡಿದ್ದ. ಅಪರಾಧಿಯನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ನಟಿಸಿದ್ದ.  ತನಿಖೆ ಮುಂದುವರೆದಂತೆ, ದೂರುದಾರನ ಕೈವಾಡ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Ramzan shops/ ರಂಜಾನ್‌ ಮಳಿಗೆ ವಿರುದ್ಧ ಅಪಸ್ವರ