ಭಟ್ಕಳ (Bhatkal): ಗರ್‌ ಗರ್‌ ಮಂಡ್ಲ ಜೂಗಾರಾಟ ಆಡುತ್ತಿದ್ದಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು (police raid), ೨೬ ಜನರ ವಿರುದ್ಧ ಪ್ರಕರಣ (complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿಹಿತ್ಲು ಗದ್ದೆಯ ಜಮೀನಿನಲ್ಲಿ ಆರೋಪಿತರು ಗರ್‌ ಗರ್‌ ಮಂಡ್ಲ ಜೂಗಾರಾಟ ಆಡುತ್ತಿದ್ದರು. ಮಾ.೧೫ರಂದು ರಾತ್ರಿ ೧೧.೩೦ರ ಸುಮಾರಿಗೆ ಪೊಲೀಸರು ದಾಳಿ (police raid) ನಡೆಸಿದಾಗ ಆರೋಪಿತರು ಸಿಕ್ಕಿಬಿದ್ದಿದ್ದಾರೆ. ಆರೋಪಿತರೆಲ್ಲರೂ ಭಟ್ಕಳ ತಾಲೂಕಿನವರಾಗಿದ್ದಾರೆ. ಆರೋಪಿತರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸೈ ರನ್ನಗೌಡ ಪಾಟೀಲ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : Karwar/ ವಿಶೇಷ ಚೇತನ ಬಾಲಕನ ಸಾಧನೆ

ಆರೋಪಿತರು ಯಾರ್ಯಾರು: ೧. ಮುಂಡಳ್ಳಿ ಹೊಸ್ಮನೆಯ ಜಗದೀಶ ಶನಿಯಾರ ನಾಯ್ಕ (೩೦), ನಿತ್ಯಾನಂದ ನಾರಾಯಣ ನಾಯ್ಕ (೨೮) ಮತ್ತು ದೇವೇಂದ್ರ ಜಟ್ಟಪ್ಪ ನಾಯ್ಕ (೩೬),  ಮುಂಡಳ್ಳಿ ಸತ್ಯನಾರಾಯಣ ನಗರದ ನಿವಾಸಿಗಳಾದ ಹನುಮಂತ ಶನಿಯಾರ ನಾಯ್ಕ (೩೬) ಮತ್ತು ಹನುಮಂತ ಶನಿಯಾರ ನಾಯ್ಕ,  ಮುಂಡಳ್ಳಿ ನಿವಾಸಿಗಳಾದ ನಾಗೇಶ ದುರ್ಗಪ್ಪ ನಾಯ್ಕ (೩೦), ನಾಗೇಶ ದುರ್ಗಪ್ಪ ನಾಯ್ಕ ಮತ್ತು ನಾಗರಾಜ ಲಚ್ಮಯ್ಯ ನಾಯ್ಕ, ಮುಟ್ಟಳ್ಳಿ ತಲಾಂದ ನಿವಾಸಿಗಳಾದ ವಿನೋದ ಮಂಜಯ್ಯ ನಾಯ್ಕ (೪೦), ವಿನೋದ ನಾಯ್ಕ, ಮಾದೇವ ನಾಯ್ಕ, ಮಂಗಳ ಗೊಂಡ, ಶ್ರೀನಿವಾಸ ತಿಮ್ಮಯ್ಯ ನಾಯ್ಕ ಮತ್ತು ಮಾದೇವ ನಾಗಪ್ಪ ನಾಯ್ಕ (೪೮), ಶಿರಾಲಿ ಚಿತ್ರಾಪುರ ನಿವಾಸಿಗಳಾದ ಗಣಪತಿ ದುರ್ಗಪ್ಪ ಬಾಕಡ (೫೦), ಮಾದೇವ ಬಾಕಡ, ಶ್ರೀಪಾದ ಬಾಕಡ ಮತ್ತು ರಾಮಚಂದ್ರ ನಾರಾಯಣ ಬಾಕಡ, ಭಟ್ಕಳ ಹಳೇ ಬಸ್‌ ನಿಲ್ದಾಣದ ಅಬು ಕಂಪೌಂಡ್‌ ನಿವಾಸಿ ಅಬ್ದುಲ್ ಗಫೂರ್‌ ಕೊಚ್ಚಪ್ಪ ಇಕ್ಕೇರಿ, ಮುಂಡಳ್ಳಿ ನೀರಗದ್ದೆಯ ಅನಿಲ ನಾಯ್ಕ , ಚೌತನಿ ನಿವಾಸಿಗಳಾದ ವಿನಾಯಕ ಪಾಂಡುರಂಗ ನಾಯ್ಕ, ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ, ಮಾಸ್ತಯ್ಯ ನಾಯ್ಕ ಮತ್ತು ಭರತ ರಾಮಾ ನಾಯ್ಕ,  ಮುಂಡಳ್ಳಿ ಚರ್ಚ್‌ ಕ್ರಾಸ್‌ ನಿವಾಸಿ ಸದಾಶಿವ ನಾಗಪ್ಪ ನಾಯ್ಕ.

ಇದನ್ನೂ ಓದಿ : Humanity/ ಆಟೋ ಚಾಲಕರ ಮಾನವೀಯತೆ