ಭಟ್ಕಳ (Bhatkal) : ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ (Urban Bank) ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ೧೧ ಮತ ಕ್ಷೇತ್ರಗಳಿಗೆ ಮತದಾನ ಭಾನುವಾರದಂದು ದಿ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಶಾಂತಿಯುತವಾಗಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಒಟ್ಟು ೧೫ ನಿರ್ದೇಶಕ ಮಂಡಳಿಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ೪ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿತ್ತು. ಭಾನುವಾರದಂದು ದಿ ನ್ಯೂ ಇಂಗ್ಲೀಷ್ ಸ್ಕೂಲ್ ಹಾಲ್ ನಲ್ಲಿ ನಡೆದ ೧೧ ನಿರ್ದೇಶಕರ ಮಂಡಳಿಯ ಮತದಾನ ಪ್ರಕ್ರಿಯೆಯಲ್ಲಿ ಭಾರಿ ಪೈಪೋಟಿಗಳ ಮತಗಳು ಚಲಾವಣೆಯಾಗಿದ್ದು ಅಂತಿಮವಾಗಿ ಹೊಸ ಮುಖಗಳು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : Private bus/ ಅಪಘಾತದಲ್ಲಿ ೯ ಜನರು ಗಂಭೀರ
ಉತ್ತರ ಕನ್ನಡ (Uttara Kannada) ಸಾಮಾನ್ಯ ಕ್ಷೇತ್ರದಿಂದ ಶ್ರೀಕಾಂತ ನಾರಾಯಣ ನಾಯ್ಕ ೬೮೦ ಮತ, ಪದ್ಮನಾಬ ರಾಮಕೃಷ್ಣ ಪೈ ೬೪೪ ಮತ, ಅಬ್ದುಲ್ ಖಾಲಿಕ್ ಅಬ್ದುಲ್ ಹಾದಿ ಸೌದಾಗರ್ ೬೩೧ ಮತ, ವಸಂತ ತಿಮಯ್ಯ ದೇವಾಡಿಗ ೫೮೯ ಮತ, ಶ್ರೀಧರ ಭೈರಪ್ಪ ನಾಯ್ಕ ೫೭೪ ಮತ, ರಮೇಶ ಶುಕ್ರ ನಾಯ್ಕ ೫೬೧ ಮತ, ರಾಮ ತಿಮ್ಮಣ್ಣ ನಾಯ್ಕ ೫೦೦ ಮತ, ಉಡುಪಿ (Udupi) ಜಿಲ್ಲೆ ಸಾಮಾನ್ಯ ಕ್ಷೇತ್ರದಿಂದ ತುಳಿಸಿದಾಸ ಮಾಸ್ತಿ ಮೊಗೇರ ೩೬೧ ಮತ ಮತ್ತು ಮೀಸಲಾತಿ ಹಿಂದುಳಿದ ವರ್ಗ ಬ ಕ್ಷೇತ್ರದಿಂದ ಮನ್ಯೂಯಲ್ ಎಂ ಲಿಮಾ ೧೧೩೫ ಮತ, ಮೀಸಲಾತಿ ಪರಿಶಿಷ್ಟ ಜಾತಿ ಕ್ಷೇತ್ರ ಗಣಪತಿ ಗೋಯ್ದ ಮೊಗೇರ ೮೬೭ ಮತ, ಪರಿಶಿಷ್ಟ ಕ್ಷೇತ್ರದಿಂದ ಸಂತೋಷ ನಾಗಯ್ಯ ಗೊಂಡ ೮೯೭ ಮತ ಪಡೆದು ಜಯಶಾಲಿಯಾಗಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ : Microfinance/ ಜೀವನ ಅಂತ್ಯಕ್ಕೆ ಮುಂದಾದ ಮೈಕ್ರೋಫೈನಾನ್ಸ್ ಸಿಬ್ಬಂದಿ
ಭಾನುವಾರದ ಬೆಳಿಗ್ಗೆಯಿಂದ ಮತಗಟ್ಟೆಗೆ ಬ್ಯಾಂಕನ ಶೇರುದಾರರು ಬಂದು ಮತಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಚಲಾಯಿಸಿದರು. ಸಂಜೆ ೫ ಗಂಟೆ ವೇಳೆಗೆ ಮತಗಳ ಎಣಿಕೆ ಆರಂಭಗೊಂಡಿತ್ತು. ಭಾರಿ ಕೂತೂಹಲ ಮೂಡಿಸಿದ ಮತ ಎಣಿಕೆಯಲ್ಲಿ ಕಳೆದ ಬಾರಿಯ ನಿರ್ದೇಶಕ ಮಂಡಳಿಯ ಓರ್ವರನ್ನು ಹೊರತು ಪಡಿಸಿ ಸಂಪೂರ್ಣ ಹೊಸ ನಿರ್ದೇಶಕರುಗಳಿಗೆ ಬ್ಯಾಂಕನ ಶೇರುದಾರರು ಮತ ಹಾಕಿ ಆಯ್ಕೆ ಮಾಡಿದ್ದಾರೆ.
ಆಯ್ಕೆಯಾದ ನೂತನ ನಿರ್ದೇಶಕರನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : Urban Bank/ ನಾಲ್ವರು ಅವಿರೋಧ ಆಯ್ಕೆ