ಭಟ್ಕಳ (Bhatkal) : ಸರ್ಕಾರದ (karnataka government) ಆದೇಶದಂತೆ ಮಂಗಳೂರು ವಿಶ್ವವಿದ್ಯಾಲಯದ (Mangaluru university) ಕುಲಸಚಿವ (registrar) ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಕೆ. ರಾಜು ಮೊಗವೀರ ಅವರು ಬುಧವಾರದಂದು ಭಟ್ಕಳದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ (hostels) ಭೇಟಿ ನೀಡಿ ಪರಿಶೀಲನೆ ನಡೆಸಿದರು (Bhatkal visit).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಸತಿ ನಿಲಯಗಳ ವಿದ್ಯಾರ್ಥಿ ಮತ್ತು ಸಿಬ್ಬಂದಿಯೊಂದಿಗೆ ಸಮಾಲೋಚಿಸಿದ ಕೆ.ರಾಜು ಮೊಗವೀರ ವಸತಿ ನಿಲಯದ ಎಲ್ಲ ವಿಭಾಗಗಳನ್ನು ಪರಿಶೀಲಿಸಿದರು. ನಿಲಯದಲ್ಲಿರುವ ಗ್ರಂಥಾಲಯ, ಅಡುಗೆ ಕೋಣೆ, ಕಂಪ್ಯೂಟರ ರೂಂ, ಸ್ಟಾಕ್ ಗೊಡೊನ್, ನೀರು ಸರಬರಾಜು, ಶೌಚಾಲಯಗಳು, ಕ್ರೀಡಾ ಸಾಮಗ್ರಿ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಿ, ಕುಡಿಯುವ ನೀರಿನ ಸೌಲಭ್ಯ ಮತ್ತು ಆಹಾರ ಗುಣಮಟ್ಟದ ಬಗ್ಗೆ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದರು.

ಇದನ್ನೂ ಓದಿ :   ಭಟ್ಕಳದಲ್ಲಿ ನೌಕರರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ವಸತಿ ನಿಲಯದಲ್ಲಿರುವ ಸಮಸ್ಯೆಗಳ ಹಾಗೂ ಅಗತ್ಯತೆಗಳ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಕುಲಸಚಿವರು ಚರ್ಚಿಸಿದರು. ಯುಜಿಡಿ ಸಂಪರ್ಕ ನೀಡುವ ಬಗ್ಗೆ ಸಂಬಂಧಿತ ಮೇಲಾಧಿಕಾರಿಗಳಿಗೆ ಸಂಪರ್ಕಿಸಿ ಕೂಡಲೇ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಭರವಸೆಯನ್ನು ನೀಡಿದರು. ಮಹಿಳಾ ವಸತಿ ನಿಲಯದ ನೂತನ ಕಟ್ಟಡವನ್ನು ಕೂಡಲೇ ಪ್ರಾರಂಭಿಸುವ ನಿರ್ಣಯದ ಬಗ್ಗೆ ವಿಚಾರಿಸಿ ತಮ್ಮ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು.

ಇದನ್ನೂ ಓದಿ :  ಗೋವಾ ಪೊಲೀಸರಿಂದ ಕಾರವಾರದ ಮಹಿಳೆ ಬಂಧನ

ರಾಜ್ಯದ (Karnataka) ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಟ್ಕಳದಲ್ಲಿ ಓದುತ್ತಿರುವ ಬಗ್ಗೆ ಕುಲಸಚಿವರು ಪ್ರಶಂಸಿಸಿದರು. ಇಲಾಖೆಯಿಂದ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡೆದು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ (Bhatkal visit) ಭಟ್ಕಳ ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಶಮ್ಸುದ್ದೀನ್, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರು, ಸಿಬ್ಬಂದಿ ಇದ್ದರು.

ವಿಡಿಯೋ ನೋಡಿ : ಈ ಪೋರನ ಕಥೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ