ಭಟ್ಕಳ (Bhatkal) : ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ರಸ್ತೆಯಲ್ಲಿದ್ದ ಗೋವನ್ನು ಕದ್ದು ಪಾರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ (CCTV viral) ಸೆರೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶುಕ್ರವಾರ ಮುಂಜಾನೆ ೩.೧೫ರ ಸುಮಾರಿಗೆ ಜಾಲಿ ಬ್ಯಾಂಕ್ ಸಮೀಪ ಕಾರಿನಲ್ಲಿ ಬಂದ ಕಳ್ಳರು ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಮುಖಗವಸ ಧರಿಸಿದ್ದರು. ರಸ್ತೆಯಲ್ಲಿದ್ದ ಗೋವಿಗೆ ಆಹಾರ ನೀಡುವ ನೆಪದಲ್ಲಿ ಗೋವಿನ ಸಮೀಪ ಹೋಗಿ ಬಳಿಕ ಅದನ್ನು ಎತ್ತಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಗೋಲ್ಡನ್‌ ಗ್ರೂಪ್‌ ಲಕ್ಕಿ ಡ್ರಾ ಸ್ಕೀಂಗೆ ತಡೆ

ಈ ಎಲ್ಲಾ ದೃಶ್ಯಗಳು ಅಲ್ಲೇ ಸಮೀಪವಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.

ಇದನ್ನೂ ಓದಿ : ಆಟೋ ಡಿಕ್ಕಿಯಾಗಿ ಸ್ಕೂಟರ್ ಸವಾರಗೆ ಗಾಯ