ಭಟ್ಕಳ (Bhatkal) : ಮಾಡಿದ ಸಾಲವನ್ನು ತೀರಿಸಲಾಗದೆ, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ತಾನು ಕೆಲಸ ಮಾಡುತ್ತಿದ್ದ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆತ್ಮಹತ್ಯೆ ಮಾಡಿಕೊಂಡ ಯುವಕ ಹೆಬಳೆ ಹೊನ್ನೆಗದ್ದೆ ನಿವಾಸಿ ಸಂದೀಪ ತಿಮ್ಮಯ್ಯ ನಾಯ್ಕ ಎಂದು ತಿಳಿದು ಬಂದಿದೆ. ಇವರು ರಾತ್ರಿ ೭ ಗಂಟೆಯಿಂದ ಬೆಳ್ಳಿಗ್ಗೆ ೭ ಗಂಟೆಯ ತನಕ ಅಲ್ ಮನಲ್ ಲಾಡ್ಜ್ ನಲ್ಲಿ ಪಾರ್ಟೈಮ್ ಕೆಲಸ ಮಾಡುತ್ತಿದ್ದರು. ಬಳಿಕ ಹಗಲು ಹೊತ್ತಿನಲ್ಲಿ ತೆಂಗಿನಗುಂಡಿಯ ಖಾಸಗಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಹಿರೇಗುತ್ತಿಯಲ್ಲಿ ಕಡಲಾಮೆ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ಚಿಂತನೆ

ಗುರುವಾರ ರಾತ್ರಿ ಎಂದಿನಂತೆ ಭಟ್ಕಳದಲ್ಲಿ (Bhatkal) ಇರುವ ಲಾಡ್ಜ್ ಗೆ ಕೆಲಸಕ್ಕೆ ಬಂದವರು ಶುಕ್ರವಾರ ಬೆಳಿಗ್ಗೆ ೭ ಗಂಟೆಗೆ ಮನೆಗೆ ಹೋಗಿದ್ದರು. ಬಳಿಕ ಮತ್ತೆ ಲಾಡ್ಜ್ ಗೆ ಬಂದವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮಾಡಿದ ಸಾಲವನ್ನು ತೀರಿಸಲಾಗದೆ. ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ : ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಶುಕ್ರವಾರ ಬೆಳಿಗ್ಗೆ ೮.೩೦ ರಿಂದ ೯.೩೦ ರ ಅವಧಿಯಲ್ಲಿ ನೇಣು ಬಿಗಿದುಕೊಂಡು ಸತ್ಕಾರ ಹೋಟೆಲ್ ಪಕ್ಕದಲ್ಲಿರುವ ಲಾಡ್ಜ್ ನ ರೂಮ್ ನಂಬರ ೩೦೭ರಲ್ಲಿ ಸಿಲಿಂಗ್ ಫ್ಯಾನ್ ಗೆ ವೈಯರ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಜನೆ ಕುಣಿತ ಸ್ಪರ್ಧೆಯಲ್ಲಿ ಯಕ್ಷದೇವತೆ ತಂಡ ಪ್ರಥಮ

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಮೃತರ ಸಹೋದರ ಶೇಖರ ತಿಮ್ಮಯ್ಯ ನಾಯ್ಕ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಪಿ.ಎಸ್.ಐ ನವೀನ ನಾಯ್ಕ, ವಿಧಿ ವಿಜ್ಞಾನ ಸ್ಥಳ ಪರಿಶೀಲನಾಧಿಕಾರಿ ರಮೇಶ, ನಗರ ಠಾಣೆಯ ಸಿಬ್ಬಂದಿ ದೀಪಕ ನಾಯ್ಕ ,ಮದಾರಸಾಬ ಚಿಕ್ಕೇರಿ, ದೇವು ನಾಯ್ಕ, ಕಿರಣ ಪಾಟೀಲ್, ವಿಜಯ ಜಾಧವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುದ್ದಿ ತಿಳಿದು ಸಚಿವ ಮಂಕಾಳ ವೈದ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ:  ರೈಲಿನಿಂದ ಬಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು