ಭಟ್ಕಳ (Bhatkal): ತಾಲೂಕಿನ ಪುರವರ್ಗ ರೈಲ್ವೆ ಹಳಿ ಸಮೀಪ ಓರ್ವ ಯುವಕನ ಮೇಲೆ ಮೂವರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಯಲ್ವಡಿಕವೂರು ಭಗತ ನಗರ ನಿವಾಸಿ ಶಿಲ್ಪಿ ಕೆಲಸ ಮಾಡುವ ನಾಗರಾಜ ಲಕ್ಷ್ಮಣ ನಾಯ್ಕ (೨೪) ಚಾಕು ಇರಿತಕ್ಕೊಳಗಾದವ. ಆರೋಪಿಗಳನ್ನು ಮಂಜುನಾಥ ಮಾಸ್ತಪ್ಪ ನಾಯ್ಕ ಪುರವರ್ಗ, ದಯಾನಂದ ವೈಕುಂಠ ನಾಯ್ಕ ಹಡೀನ ಹಾಗೂ ಶಿವ ರಾಜು ನಾಯ್ಕ ಭಟ್ಕಳ ಎಂದು ಗುರುತಿಸಲಾಗಿದೆ. ಆರೋಪಿಗಳು  ಹಲ್ಲೆಗೊಳಗಾದ ಯುವಕ ನಾಗರಾಜ ನಾಯ್ಕನ ಗೆಳೆಯರು ಎಂದು ತಿಳಿದುಬಂದಿದೆ.

ವಿಡಿಯೋ ಸಹಿತ ಇದನ್ನೂ ಓದಿ : Chitrapura Shree/ ಗಣಪತಿ ಆರಾಧಿಸಿದರೆ ಯಶಸ್ಸು

ಕಳೆದ ಜನೇವರಿ ತಿಂಗಳಿನಲ್ಲಿ ಭಟ್ಕಳದ (Bhatkal) ಸೋಡಿಗದ್ದೆ ಜಾತ್ರೆ ಸಮಯದಲ್ಲಿ ಮಂಜುನಾಥ ನಾಯ್ಕ ಮತ್ತು ದಯಾನಂದ ನಾಯ್ಕ ಸೇರಿಕೊಂಡು ವೆಂಕಟೇಶ ಮಂಜುನಾಥ ನಾಯ್ಕ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಈ ಸಂಬಂಧ ಆರೋಪಿತರ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಜ.೨೫ರಂದು ಪ್ರಕರಣ ದಾಖಲಾಗಿತ್ತು. ಇದೇ ವಿಚಾರವಾಗಿ ಆರೋಪಿತರು ಸೋಡಿಗದ್ದೆ ಜಾತ್ರೆ ಸಮಯದಲ್ಲಿ ಹಲ್ಲೆ ನಡೆದ ಸಮಯದಲ್ಲಿ ಹಲ್ಲೆಗೊಳಗಾದ ಯುವಕ ತಮ್ಮ ಸಂಗಡ (ಜೊತೆಯಲ್ಲಿ) ಬರಲಿಲ್ಲ ಎಂಬ ಕಾರಣಕ್ಕೆ ನಾಗರಾಜ ಮೇಲೆ ಸಿಟ್ಟಿನಿಂದ ಇದ್ದರೆನ್ನಲಾಗಿದೆ.

ಇದನ್ನೂ ಓದಿ : Heart checkup/ ೨೬೩ ಜನರ ಉಚಿತ ಹೃದಯ ತಪಾಸಣೆ

ಡಿ.೧೮ರಂದು ಮಂಗಳವಾರ ರಾತ್ರಿ ೧೧.೪೦ರ ಸುಮಾರಿಗೆ ನಾಗರಾಜ ಮತ್ತು ಆತನ ಗೆಳೆಯನಾದ ಲೊಕೇಶ ಗಣಪತಿ ನಾಯ್ಕ ಮೋಟಾರ ಸೈಕಲಿನಲ್ಲಿ ಬರುತ್ತಿರುವಾಗ ಹಲ್ಲೆ ನಡೆಸಿದ್ದಾರೆ. ಪುರವರ್ಗದ ರೈಲ್ವೆ ಟ್ರ್ಯಾಕ್ ಹತ್ತಿರ ಮೂವರೂ ಆರೋಪಿತರು ಒಂದೇ ಮೋಟಾರ ಸೈಕಲಿನಲ್ಲಿ ಬಂದವರು ನಾಗರಾಜನ ಮೋಟಾದ ಸೈಕಲನ್ನು ಅಡ್ಡಗಟ್ಟಿ ತಡೆದು  ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಮಂಜುನಾಥ ನಾಯ್ಕ  ತನ್ನ ಬಳಿ ಇದ್ದ ಚಾಕುವಿನಿಂದ ನಾಗರಾಜನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಹಲ್ಲೆಗೊಳಗಾದ ನಾಗರಾಜ ನಾಯ್ಕ ದೂರು (complaint) ದಾಖಲಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : Aviation/ ಸರ್ಕಾರಿ ಶಾಲೆ ಮಕ್ಕಳ ವಿಮಾನಯಾನ