ಭಟ್ಕಳ (Bhatkal): ಜನವರಿ ೧೦ರಂದು ಬಹರೇನ್ (Bahrain) ದೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ (Karnataka), ಬಹರೈನ್ (Bahrain) ಇವರ ಸಾರಥ್ಯದಲ್ಲಿ ನಡೆಯುವ “ಕರ್ನಾಟಕ ಸಂಗಮ ೨೦೨೫” ಕಾರ್ಯಕ್ರಮದಲ್ಲಿ ಭಟ್ಕಳದ ಝೇಂಕಾರ್ ಮೆಲೋಡಿಸ್ ತಂಡದ ಕಲಾವಿದ ರಾಜಾರಾಮ್ ಪ್ರಭು ಭಾಗವಹಿಸಲಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇವರು ಖ್ಯಾತ ಮಿಮಿಕ್ರಿ ಕಲಾವಿದ, ಡ್ಯುಯಲ್ ವಾಯ್ಸ್ ಗಾಯಕ ಹಾಗೂ ಹಲವಾರು ಟಿ.ವಿ. ವಾಹಿನಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ಬಹುಮಖ ಪ್ರತಿಭೆಯ ಕಲಾವಿದರಾಗಿದ್ದಾರೆ. ಇವರು ಥೈಲ್ಯಾಂಡ್ ನಲ್ಲಿಯೂ ಕೂಡ ಹಿಂದೆ ಕಾರ್ಯಕ್ರಮ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರೂ, ನಟ‌-ನಟಿಯರು ಹಾಗೂ ಆಯ್ದ ಕಲಾವಿದರು ಸಹ ಭಾಗವಹಿಸಲಿದ್ದಾರೆ.

ಇದನ್ನೂ ಓದಿ : ಭೀಮಾ ನದಿಯ ಕಡವಿನಕಟ್ಟೆ ಅಣೆಕಟ್ಟಿನಲ್ಲಿ ಹೂಳು