ಭಟ್ಕಳ (Bhatkal): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ (railway station) ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವ ತಮ್ಮ ಕರ್ತವ್ಯ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ (bike accident) ಗಟಾರದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಮಾ. ೬ರಂದು ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತಪಟ್ಟ ವ್ಯಕ್ತಿ ಸಂಜಯಕುಮಾರ ಗಣಪಯ್ಯ ಶೇರುಗಾರ (೫೨). ಇವರು ಬೈಂದೂರು (byndoor) ಬಾಡ ನಿವಾಸಿ ಎಂದು ತಿಳಿದು ಬಂದಿದೆ. ಭಟ್ಕಳದಲ್ಲಿ ಕೊಂಕಣ ರೈಲ್ವೆಯಲ್ಲಿ (Konkan railway) ಇಂಜಿನಿಯರಿಂಗ್ ವಿಭಾಗದಲ್ಲಿ ಟ್ರ್ಯಾಕ್‌ಮ್ಯಾನ್ (trackman) ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನು ಓದಿ : konkan railway/ ವಾರಕ್ಕೊಮ್ಮೆ ಎರಡು ವಿಶೇಷ ರೈಲು

ಇವರು ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಬೆಳಗ್ಗೆ ಬೈಕಿನಲ್ಲಿ ಬೈಂದೂರಿಗೆ ತೆರಳಿದ್ದರು. ೭ ರಿಂದ ೭.೩೦ರ ಸುಮಾರಿಗೆ ಭಟ್ಕಳ ತಾಲೂಕಿನ ಬೆಳಕೆ ಸೊಸೈಟಿಯ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಆಕಸ್ಮಿಕವಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಇದ್ದ ಗಟಾರದಲ್ಲಿ ಬಿದ್ದಿದ್ದಾರೆ (Bike accident). ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನು ಓದಿ : Bhatkal/ ಇಡೀ ಮನೆಯನ್ನೇ ಬ್ಲಾಸ್ಟ್‌ ಮಾಡ್ತಾರಂತೆ !

ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ರೈಲ್ವೆ ಜೂನಿಯರ್ ಇಂಜಿನಿಯರ್ ಪಾಯಸ್ ತೊಮ್ಮಿ ದೂರು (complaint) ನೀಡಿದ್ದಾರೆ. ಗ್ರಾಮೀಣ ಠಾಣೆ ಪಿ.ಎಸ್.ಐ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : crane collision/ ಕ್ರೇನ್‌ ಡಿಕ್ಕಿಯಾಗಿ ಪಾದಚಾರಿ ಸಾವು