ಹೊನ್ನಾವರ (Honnavar): ಬೈಕ್‌ ಅಪಘಾತದಲ್ಲಿ (bike accident) ಗಂಭೀರ ಗಾಯಗೊಂಡು ತಿಂಗಳ ಕಾಲ ಕೋಮಾದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ (passed away).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಜಲವಳ್ಳಿಯ ದೇವರಾಜ ಮಂಜುನಾಥ ನಾಯ್ಕ (೩೫) ಮೃತ ದುರ್ದೈವಿ. ಇವರು ಸೆ.೧೧ರಂದು ಜಲವಳ್ಳಿ ಕರ್ಕಿಯ ವಿಶ್ವನಾಥ ಮಾರುತಿ ಆಚಾರಿ ಎಂಬುವವರ ಬೈಕಿನಲ್ಲಿ ಕುಳಿತು ಹೊನ್ನಾವರದ ಕಡೆಗೆ ಬರುತ್ತಿದ್ದಾಗ ಬೈಕ್‌ ಅಪಘಾತವಾಗಿತ್ತು. ಖರ್ವಾ ಧನ್ವಂತರಿ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿ ೬೯ರಲ್ಲಿ ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ವಿಶ್ವನಾಥ ಆಚಾರಿ ಚಲಾಯಿಸುತ್ತಿದ್ದ ಬೈಕ್‌ ಪಲ್ಟಿ ಹೊಡೆದಿತ್ತು. ಪರಿಣಾಮ ಸವಾರಿರಬ್ಬರೂ ಗಾಯಗೊಂಡಿದ್ದರು.

ಇದನ್ನೂ ಓದಿ :  ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು

ಮುಖ, ತಲೆ, ಕೈಗಳಿಗೆ ಗಾಯವಾಗಿ ಗಂಭೀರಗೊಂಡಿದ್ದ ದೇವರಾಜ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿತ್ತು. ಕೋಮಾದಲ್ಲಿದ್ದ ದೇವರಾಜ ಚಿಕಿತ್ಸೆಗೆ ಸ್ಪಂದಿಸದೆ ಅ.೭ರಂದು ರಾತ್ರಿ ೧೧.೫೫ರ ಸುಮಾರಿಗೆ ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ (passed away). ಈ ಕುರಿತು ಮೃತನ ಸಹೋದರ ಗುರುರಾಜ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case registered). ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :   ಶಿವಮೊಗ್ಗ ಸಹಿತ ೧೨ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌