ಭಟ್ಕಳ (Bhatkal) : ಎಕ್ಟಿವಾಗೆ (Activa) ಬೈಕ್ ಡಿಕ್ಕಿ ಹೊಡೆದ (bike collide) ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಬೆಳಕೆ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಎಕ್ಟಿವಾ ಸವಾರ ಬೈಂದೂರು (Byndoor) ತಾಲೂಕಿನ ಶಿರೂರು ಕರಕಟ್ಟೆಯ ಇರ್ಫಾನ್ ಇಸ್ಮಾಯಿಲ್ ಭಾತಿಯಾ (೫೪) ಶಿರೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದಾಗ ಅಪಘಾತ ನಡೆದಿದೆ. ಎದುರಿನಿಂದ ಬಂದ ಬೈಕ್ ಸವಾರ ಭಟ್ಕಳ ತಾಲೂಕಿನ ಬೆಳಕೆಯ ಪಿನ್ನುಪಾಲು ನಿವಾಸಿ ಹೊನ್ನಪ್ಪ ನಾಗಪ್ಪ ನಾಯ್ಕ (೪೯) ಡಿಕ್ಕಿ ಹೊಡೆದಿದ್ದಾರೆ (bike collide) ಎಂದು ದೂರಲಾಗಿದೆ. ಅಪಘಾತದಲ್ಲಿ ಎಕ್ಟಿವಾ ಸವಾರ ಇರ್ಫಾನ್ ಮತ್ತು ಬೈಕ್ ಹಿಂಬದಿ ಸವಾರ ಕಿಶೋರ ನಾಗಪ್ಪ ನಾಯ್ಕ ಗಾಯಗೊಂಡಿದ್ದಾರೆ. ಈ ಕುರಿತು ಇರ್ಫಾನ್ ಅವರ ಮಗ ಉಜೈಪ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : Save life / “ನೀರು ನೀಡಿ-ಜೀವ ಉಳಿಸಿ” ಅಭಿಯಾನ