ಭಟ್ಕಳ (Bhatkal) : ಬೈಕಿಗೆ ಇನ್ನೊಂದು ಅಪರಿಚಿತ ಬೈಕ್‌ ಡಿಕ್ಕಿ ಹೊಡೆದು (bike collision) ಪರಾರಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಈ ಕುರಿತು ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ. ಡಿ.೩೦ರಂದು ರಾತ್ರಿ ೧೦ ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಕ್‌ ಸವಾರ ಸಾಹಿಲ್‌ ಶಬ್ಬೀರ್‌ ಅಹ್ಮದ್‌ ಶೇಖ (೨೧) ಮತ್ತು ಹಿಂಬದಿ ಸವಾರ ಅಬ್ದುಲ್‌ ಅಜೀಜ್‌ ಮಹ್ಮದ್‌ ರಫೀಕ್‌ ಗಾಯಗೊಂಡವರು. ಇವರಿಬ್ಬರೂ ಭಟ್ಕಳದ ಬಂದರ ರಸ್ತೆಯ ಕೋಕ್ತಿ ನಗರದ ಎರಡನೇ ಕ್ರಾಸ್‌ ನಿವಾಸಿಗಳು. ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ರಂಗಿನಕಟ್ಟಾ ಬಳಿ ಅಲ್‌ ಖಲೀಜಾ ಹೋಟೆಲ್‌ ಎದುರುಗಡೆ ಈ ಅಪಘಾತ ನಡೆದಿದೆ.

ಇದನ್ನೂ ಓದಿ : ವಿಮಾನದ ಶೌಚಾಲಯದಲ್ಲಿ ೨ ಕೋಟಿ ಚಿನ್ನ, ಭಟ್ಕಳದ ವ್ಯಕ್ತಿ ಬಂಧನ

ಬೈಕ್‌ ಚಲಾಯಿಸುತ್ತಿದ್ದ ಸಾಹಿಲ್‌ ಶಬ್ಬೀರ್‌ ಅಹ್ಮದ್‌ ಶೇಖ ಜಾಲಿ ರಸ್ತೆ ಮುಖಾಂತರ ಮನೆಗೆ ಹೋಗಲು ರಸ್ತೆಯ ಡಿವೈಡರ್‌ ಹತ್ತಿರ ನಿಂತು ಬರ ಹೋಗುವ ವಾಹನ ನೋಡುತ್ತಿದ್ದಾಗ ಅಪರಿಚಿತ ಬೈಕ್‌ ಡಿಕ್ಕಿ ಹೊಡೆದಿದೆ. ಹೊನ್ನಾವರ (Honnavar) ಕಡೆಯಿಂದ ಭಟ್ಕಳ ಕಡೆಗೆ ಅತಿ ವೇಗ ಮತ್ತು ನಿಷ್ಕಾಳಜಿಯಿಂದ ಬೈಕ್‌ ಚಲಾಯಿಸಿಕೊಂಡು ಬಂದ ಅಪರಿಚಿತ ಬೈಕಿಗೆ ಡಿಕ್ಕಿ ಹೊಡೆದು (bike collision), ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಬೈಕ್‌ ಸವಾರರಿಬ್ಬರೂ ಗಾಯಗೊಂಡಿದ್ದಾರೆ. ಹಿಂಬದಿ ಸವಾರ ಅಬ್ದುಲ್‌ ಅಜೀಜ್‌ ಅವರ ಬಲಗಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಇದನ್ನೂ ಓದಿ : ಪ್ರಶಸ್ತಿ ಪಡೆದ ಪತ್ರಕರ್ತರ ಬಗ್ಗೆ ನಿಮಗೆ ಗೊತ್ತಾ?