ಭಟ್ಕಳ (Bhatkal): ಬೈಕ್ ಡಿಕ್ಕಿಯಾಗಿ (bike accident) ಗಂಭೀರ ಗಾಯಗೊಂಡ ಪಾದಚಾರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ (pedestrian death) ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಪುರವರ್ಗದ ಗಣೇಶನಗರ ನಿವಾಸಿ ಶ್ರೀಧರ ನಾರಾಯಣ ಶೆಟ್ಟಿ (೫೩) ಮೃತ ದುರ್ದೈವಿ. ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಇವರು ಸೆ.೬ರಂದು ರಾತ್ರಿ ೭.೩೦ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಸರ್ಪನಕಟ್ಟೆಯಿಂದ ಭಟ್ಕಳ ಕಡೆಗೆ ಅತಿ ವೇಗದಿಂದ ಬಂದ ಬೈಕ್, ಚಾಲಕನ ಅಜಾಗರೂಕತೆಯಿಂದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ತಾಲೂಕಿನ ಸರ್ಪನಕಟ್ಟೆ ಹುಲಗತ್ತಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಗಣೇಶ ಕೂಡ್ರಿಸಿದ ಮನೆಯಲ್ಲಿ ಸೂತಕದ ಛಾಯೆ
ತಲೆಯ ಹಿಂಬದಿ ಗಂಭೀರ ಗಾಯಗೊಂಡ ಶ್ರೀಧರ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ (Manipal) ಕೆಎಂಸಿ ಆಸ್ಪತ್ರೆಗೆ (KMC hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ೧೧.೫೭ರ ಸುಮಾರಿಗೆ ಮೃತಪಟ್ಟಿದ್ದಾರೆ (pedestrian death). ಬೈಕ್ ಸವಾರ (bike rider) ತಾಲೂಕಿನ ಕುಂಟವಾಣಿ ನಿವಾಸಿ ದರ್ಶನ್ ಸಂಕಯ್ಯ ಗೊಂಡ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered). ಮೃತರ ಸಂಬಂಧಿ ರಾಘವೇಂದ್ರ ವೆಂಕಟೇಶ ಶೆಟ್ಟಿ ಬೈಕ್ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಖುದ್ದು ಬೋಟ್ ಚಲಾಯಿಸಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ ಸಚಿವ