ಭಟ್ಕಳ (Bhatkal) : ಅತಿ ವೇಗ ಮತ್ತು ಅಜಾಗರೂಕತೆಯ ಬೈಕ್ ಚಾಲನೆಗೆ ಒಂದು ಜೀವ ಹಾನಿಯಾಗಿದೆ. ಗುಂಡಿ ತಪ್ಪಿಸಲು ಹೋಗಿ ವೇಗದಲ್ಲಿದ್ದ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು (Bike crashes), ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಮುರುಡೇಶ್ವರದ (Murudeshwar) ಬಸ್ತಿ ಕಾಯ್ಕಿಣಿಯ ಬಿದ್ರಮನೆ ರಸ್ತೆ ನಿವಾಸಿ ಮಾರುತಿ ಕುಪ್ಪಯ್ಯ ನಾಯ್ಕ (೫೮) ಮೃತರು. ಇವರು ಏ.೧ರಂದು ಬೆಳಿಗ್ಗೆ ೧೦.೪೦ಕ್ಕೆ ಅಳ್ವೆಕೋಡಿಯಿಂದ ಶಿರಾಲಿ ಕಡೆಗೆ ಬರುತ್ತಿದ್ದಾಗ ದುರ್ಘಟನೆ ನಡೆದಿದೆ. ಎಂ.ಜಿ.ಎಂ. ದೇವಸ್ಥಾನ (MGM Temple) ದಾಟಿ ಮುಂದಕ್ಕೆ ಬರುತ್ತಿದ್ದಾಗ ಬ್ಯಾಂಕ್ ಆಫ್ ಬರೋಡಾ (Bank of Baroda) ಎದುರು ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿದ್ದಾರೆ.
ಇದನ್ನೂ ಓದಿ : Farewell ceremony/ ಭಟಕಳ ಅರ್ಬನ್ ಬ್ಯಾಂಕ್‌ನಲ್ಲಿ ಬೀಳ್ಕೊಡುಗೆ ಸಮಾರಂಭ
ವೇಗದಲ್ಲಿದ್ದ ಅವರ ಬೈಕ್ ನಿಯಂತ್ರಣ ತಪ್ಪಿ ಬಲಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಶ್ರೀ ಅಮ್ಮ ಹೂವಿನ ಅಂಗಡಿಯ ಎದುರಿನಲ್ಲಿದ್ದ ಟೇಬಲ್ ಸ್ಟ್ಯಾಂಡಿಗೆ ಡಿಕ್ಕಿ ಹೊಡೆದಿದೆ (Bike crashes). ಎಚ್ಚರ ತಪ್ಪಿ ಬಿದ್ದ ಮಾರುತಿ ನಾಯ್ಕ ಅವರನ್ನು ಚಿಕಿತ್ಸೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ತರುವಾಗ ಮೃತಪಟ್ಟಿದ್ದಾರೆ. ಈ ಕುರಿತು ಬೈಕ್ ಹಿಂಬದಿ ಸವಾರ ಕಾಯ್ಕಿಣಿ ಗುಮ್ಮನಕ್ಕಲ್ ನಿವಾಸಿ ತಿಮ್ಮಯ್ಯ ಈರಪ್ಪ ನಾಯ್ಕ ದೂರು (Complaint) ದಾಖಲಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : helping hand/ ಹುತಾತ್ಮ ಯೋಧನ ಕುಟುಂಬಕ್ಕೆ ಧನಸಹಾಯ