ಕುಮಟಾ (Kumta) : ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೊರಟಿದ್ದ ವಾಕರಸಾ ಸಂಸ್ಥೆಯ (NWKRTC) ಬಸ್ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ (Bus Collision) ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ೫.೩೦ರ ಸುಮಾರಿಗೆ ನಡೆದಿದೆ. ಈ ಘಟನೆಯಲ್ಲಿ ಬೈಕ್ ಜಖಂಗೊಂಡಿದ್ದು, ಬಸ್ ಮುಂಭಾಗಕ್ಕೂ ಹಾನಿಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಸವಾರ ತದಡಿಯ ಮೂಡಂಗಿ ನಿವಾಸಿ ರವಿ ಪರಮೇಶ್‌ವರ ನಾಯ್ಕ (೪೭) ಗಾಯಗೊಂಡವರು. ವಾಕರಸಾ ಸಂಸ್ಥೆಯ ಬಸ್ ಚಾಲಕ ಹೊನ್ನಾವರ (Honnavar) ಕಡತೋಕ ನಿವಾಸಿ ಬಿ.ಎಸ್.ಬಾಲರಾಜ (೩೫) ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Case Registered).
ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ
ಬೈಕ್ ಸವಾರ ನಾಗರಾಜ ಗೌಡ ಮಿರ್ಜಾನ ಕೋಟೆ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿಸುತ್ತಿದ್ದಾಗ ಹಿಂಬದಿಯಿಂದ ಬಂದ ಬಸ್ ಡಿಕ್ಕಿಯಾಗಿದೆ(Bus collision). ಬೈಕ್ ಸವಾರನ ತಲೆ ಮತ್ತು ಬಲಗಾಲಿನ ಮೊಣಗಂಟಿನ ಕೆಳಗೆ ಗಾಯವಾಗಿದೆ. ಮಿರ್ಜಾನ ಗೌರಸ್ಕಿ ನಿವಾಸಿಯಾದ ಕೂಲಿ ಕಾರ್ಮಿಕ ನಾಗರಾಜ ಭೀಮ ಗೌಡ (೩೫) ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಲಾರಿ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯ