ಭಟ್ಕಳ (Bhatkal): ಕಾರು ಡಿಕ್ಕಿಯಾಗಿ (Car Accident) ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಕೆ ಕಾನಮದ್ಲು ಗ್ರಾಮದ ಹೊಸಗದ್ದೆಮನೆ ನಿವಾಸಿ ಮಾಸ್ತಿ ಸೋಮಯ್ಯ ನಾಯ್ಕ (೪೦) ಗಾಯಗೊಂಡವರು. ಕಾರು ಚಾಲಕ ಪುರವರ್ಗ ವಾಸಿ ಮೊಹ್ಮದ್ ಆದಿಬ್ ಮುಸ್ತಾಕ್ ಮೊಹ್ಮದ್ ಯೂಸೂಫ್ (೧೯) ವಿರುದ್ಧ ದೂರು ದಾಖಲಾಗಿದೆ. ನಿನ್ನೆ ರವಿವಾರ ಸಂಜೆ ೫ ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸರ್ಪನಕಟ್ಟೆ ಕಡೆಯಿಂದ ಭಟ್ಕಳ ಕಡೆಗೆ ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು, ಪುರವರ್ಗದ ದಾನೀಶ್ ಹೋಟೆಲ್ ಎದುರು ಒಮ್ಮೇಲೆ ರಸ್ತೆಯ ಬಲಬದಿಗೆ ಕಾರು ತಿರುಗಿಸಿದ್ದರಿಂದ ಬೈಕ್‌ಗೆ ಗುದ್ದಿದೆ (Car Accident). ಬೈಕ್ ಸವಾರ ಮಾಸ್ತಿ ನಾಯ್ಕ ಅವರ ಮುಖ ಮತ್ತು ಎಡಗಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ಕುರಿತು ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Case Registered).
ಇದನ್ನೂ ಓದಿ : ಪಿಎಸೈ ಯಲ್ಲಪ್ಪ ಅಮಾನತು – “ಭಟ್ಕಳ ಡೈರಿ” ವರದಿ ಫಲಶ್ರುತಿ



