ಭಟ್ಕಳ (Bhatkal): ತಾಲೂಕಿನ ಪುರವರ್ಗದಲ್ಲಿ ದುಷ್ಕರ್ಮಿಗಳು ದ್ವಿಚಕ್ರ ವಾಹನ ಕಳವು ಮಾಡಿ (bike theft), ಬಳಿಕ ಅದಕ್ಕೆ ಬೆಂಕಿ ಹಚ್ಚಿದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪುರವರ್ಗದ ನಿವಾಸಿ ಅಬ್ದುಲ್ ಹಮೀದ (41) ಅವರ ಮನೆ ಎದುರು ನಿಲ್ಲಿಸಿದ್ದ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕನ್ನು ದುಷ್ಕರ್ಮಿಗಳು ತಳ್ಳಿಕೊಂಡು ಹೋಗಿದ್ದಾರೆ (bike theft). ಬಳಿಕ ರಸ್ತೆಯಲ್ಲೇ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯಿಂದ ವಾಹನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಇದನ್ನು ಓದಿ: Asset seized/ ಭಟ್ಕಳದಲ್ಲಿ ೮ ಜನರ ಬಂಧನ; ೪.೦೫ ಲಕ್ಷ ರೂ ಸ್ವತ್ತು ವಶಕ್ಕೆ
ಘಟನೆಯ ಕುರಿತು ಅಬ್ದುಲ್ ಹಮೀದ್ ತಂದೆ ಉಮರ್ ಗಂಗಾವಳಿ ಎಂಬುವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ (case filed). ನಗರ ಠಾಣೆ ಪಿ ಎಸ್ ಐ ಸೋಮರಾಜ ರಾಠೋಡ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿ: Foreign fake notes/ ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ



