ಭಟ್ಕಳ (Bhatkal) : ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.೪ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿಕೆ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮಂಡಲ ವತಿಯಿಂದ ಶಂಶುದ್ದಿನ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು (Protest Against DK Shivakumar). ಭಟ್ಕಳ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಸಂಶುದ್ದೀನ್ ಸರ್ಕಲ್ ಬಳಿ ಬಂದ ಪ್ರತಿಭಟನಾಕಾರರು ಡಿಕೆ ಶಿವಕುಮಾರ ಪ್ರತಿಕೃತಿ ದಹನ ಮಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ, ಕಾಂಗ್ರೆಸ್ (Congress) ಸಂವಿಧಾನ (Constitution) ಬದಲಾವಣೆ ಮಾಡಿದ್ದು ಒಂದೆರಡು ಬಾರಿ ಅಲ್ಲ. ಕಾಂಗ್ರೆಸ್ ಪಕ್ಷ ಬಹಳಷ್ಟು ವರ್ಷದಿಂದ ಸಂವಿಧಾನವನ್ನು ಬದಲಾವಣೆ ಮಾಡಿಕೊಂಡು ಬಂದಿದೆ. ಭಾರತದಲ್ಲಿ ಎಲ್ಲರೂ ಶಾಂತಿಯುತವಾಗಿ ಜೀವನ ನಡೆಸಲು ಅಂಬೇಡ್ಕರರವರು (BR Ambedkar) ನಮಗಾಗಿ ರಚಿಸಿದ ಸಂವಿಧಾನವಾಗಿದೆ. ಸಂವಿಧಾನ ಕಾಂಗ್ರೆಸ್ ಪಕ್ಷದ ಅಪ್ಪನ ಆಸ್ತಿಯಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ ಹೇಳಿಕೆ ಕೊಟ್ಟಿರುವುದು ದುರ್ದೈವ. ಧರ್ಮದ ಆಧಾರದಲ್ಲಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇಕಡ ನಾಲ್ಕು ಮೀಸಲಾತಿ ಖಂಡನೀಯ. ಕೂಡಲೇ ಡಿ ಕೆ ಶಿವಕುಮಾರರವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಹಾಗೂ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : Honnavar port/ ಮುಂದಿನ ತಿಂಗಳು ಅಂತಿಮ ವಿಚಾರಣೆ
ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಗುತ್ತಿಗೆಯಲ್ಲಿ ಶೇಕಡ ನಾಲ್ಕು ಮೀಸಲಾತಿ ಬಾಬಾ ಸಾಹೇಬ್ ಅಂಬೇಡ್ಕರ ಸಂವಿಧಾನಕ್ಕೆ ವಿರೋಧವಾಗಿದೆ. ಬಾಬಾ ಸಾಹೇಬ (Baba Saheb) ಅಂಬೇಡ್ಕರ ರಚಿಸಿದ ಸಂವಿಧಾನದಲ್ಲಿ ಯಾವುದೇ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಬಾರದೆಂದು ಸ್ಪಷ್ಟವಾಗಿದೆ. ಈ ನಡುವೆ ಡಿ ಕೆ ಶಿವಕುಮಾರ, ನಾವು ಸಂವಿಧಾನವನ್ನು ಬದಲಾವಣೆ ಮಾಡಿಯಾದರು ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇಕಡ ೪ ಮೀಸಲಾತಿ ನೀಡುತ್ತೇವೆ ಎಂದು ಹೇಳಿಕೆ ಕೊಡುತ್ತಾರೆ. ಇದರಿಂದ ಕಾಂಗ್ರೆಸ್ ಸಂವಿಧಾನದ ವಿರೋಧಿ ಎಂಬುದು ಮತ್ತೊಮ್ಮೆ ಜಗಜ್ಜಾಹೀರ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ : Special Buses/ ವಾಕರಸಾ ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ
ಸಾಕಷ್ಟು ಬಾರಿ ಸಂವಿಧಾನವನ್ನು ತಿರುಚುವ, ಬದಲಾಯಿಸುವ ಕೆಲಸ ಕಾಂಗ್ರೆಸ್ ನಿಂದ ನಡೆದಿದೆ ಮಾಜಿ ಸಂಸದರಾದ ಅನಂತ್ ಕುಮಾರ ಹೆಗಡೆಯವರು (Ananthkumar Hegde) ಸಂವಿಧಾನದ ವಿಚಾರ ಮಾತನಾಡಿದಾಗ ಈ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿತ್ತು. ನಿಜವಾಗಿಯೂ ಸಂವಿಧಾನದ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ. ಭಾರತೀಯ ಜನತಾ ಪಾರ್ಟಿ (BJP) ಬಾಬಾ ಸಾಹೇಬ್ ಅಂಬೇಡ್ಕರರವರ ಪಂಚ ಕ್ಷೇತ್ರವನ್ನು ನಿರ್ಮಾಣ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರರವರು ಮೃತರಾದ ನಂತರ ಅವರ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ (Delhi) ನಡೆಸಲು ಕಾಂಗ್ರೆಸ್ ಸರ್ಕಾರ (Congress Government) ಅನುಮತಿ ನಿರಾಕರಿಸಿತ್ತು ಎಂದು ಹೇಳಿದರು.
ಇದನ್ನೂ ಓದಿ : recruitment Exam/ ಕಾರವಾರದ ಪ್ರಾಧ್ಯಾಪಕನ ವಿರುದ್ಧ ಮೈಸೂರಿನಲ್ಲಿ ದೂರು
ಭಟ್ಕಳ ಮಂಡಲ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ಭಾರತದ ಸಂವಿಧಾನದಲ್ಲಿ ಬಂದಾಗ ಆರ್ಟಿಕಲ್ ೩೭೦ ಹಾಗೂ ೩೫ಎ ಇರಲಿಲ್ಲ. ಅದನ್ನು ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ತುರುಕಿದ್ದು ಜವಾಹರಲಾಲ ನೆಹರು (Jawahar Lal Nehru) ಪ್ರಧಾನ ಮಂತ್ರಿ (Prime Minister) ಆಗಿರುವ ಸಂದರ್ಭದಲ್ಲಿ. ಪುನಃ ಎರಡು ವರ್ಷ ಸಂವಿಧಾನದ ಕತ್ತು ಹಿಸುಕಿ ತುರ್ತು ಪರಿಸ್ಥಿತಿಯನ್ನು ಹೇರಿರುವುದು ನೆಹರೂರವರ ಮಗಳು ಇಂದಿರಾಗಾಂಧಿಯವರ (Indira Gandhi) ಕಾಂಗ್ರೆಸ್ ಸರ್ಕಾರ. ಸಂವಿಧಾನದಲ್ಲಿ ಯಾವುದೇ ಜಾತ್ಯತೀತ ಪದ ಅನ್ನೋದು ಇರಲಿಲ್ಲ. ಆ ಪದವನ್ನು ಸೇರಿಸಿರುವುದು ಇಂದಿರಾಗಾಂಧಿ ಎಂದು ಹೇಳಿದರು.
ಇದನ್ನೂ ಓದಿ : Mankal Vaidya/ ನಮ್ಮ ಸರ್ಕಾರದಿಂದ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದ ಮಂಕಾಳ ವೈದ್ಯ
ಇಂದಿರಾಗಾಂಧಿ ಮಗ ರಾಜೀವ ಗಾಂಧಿ (Rajiv Gandhi) ಸಹ ಪ್ರಕರಣದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು (Muslim Personal Law) ರಚನೆ ಮಾಡಲು ಅನುವು ಮಾಡಿಕೊಟ್ಟು ಸಂವಿಧಾನ ಬದಲಾವಣೆ ಮಾಡಿದ್ದರು. ಸಂವಿಧಾನದ ಬಗ್ಗೆ ಈ ದೇಶದಲ್ಲಿ ಯಾರಾದರೂ ಮಾತನಾಡಿದರೆ ರಕ್ತಪಾತವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ. ಅವರದ್ದೇ ಕಾಂಗ್ರೆಸ್ ಪಾರ್ಟಿ (KPCC) ಅಧ್ಯಕ್ಷರು, ಉಪಮುಖ್ಯಮಂತ್ರಿ (DCM) ಆಗಿರುವ ಡಿ ಕೆ ಶಿವಕುಮಾರ ಸಂವಿಧಾನ ಬದಲಾವಣೆ ಮಾಡುವ ಬಗ್ಗೆ ಮಾತನಾಡಿರುತ್ತಾರೆ. ತಾವು ಎಲ್ಲಿ ರಕ್ತಪಾತ ಮಾಡುತ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಶಸ್ತಿಸಿದ ಸುಬ್ರಾಯ ದೇವಾಡಿಗ, ಸಂವಿಧಾನ ರಕ್ಷಣೆಗಾಗಿ ಭಾರತ ಜೋಡೊ ಯಾತ್ರೆ (bharat jodo yatra) ಮಾಡಿದ ರಾಹುಲ ಗಾಂಧಿ (Rahul Gandhi) ಈಗ ನ್ಯಾಯಯಾತ್ರೆಯನ್ನು ಕಾಶ್ಮೀರದಿಂದ (Kashmir) ಕನ್ಯಾಕುಮಾರಿವರೆಗೂ (Kanyakumari) ಅಥವಾ ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೂ ಅಥವಾ ಕೋಲ್ಕತ್ತಾದಿಂದ (Kolkatta) ಮಾಡುತ್ತಿರೋ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : Iftar party/ ಹಿಂದೂ ಮುಸ್ಲಿಂ ಭಾಯಿ ಭಾಯಿ ಅಂದ್ರು
ಈ ಸಂದರ್ಭದಲ್ಲಿ (Protest Against DK Shivakumar) ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ರಾಜೇಶ ನಾಯ್ಕ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ ಮತ್ತಿತರರ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.