ಕಾರವಾರ (Karwar) : ಉತ್ತರ ಕನ್ನಡ (Uttara Kannada) ಜಿಲ್ಲೆಯಾದ್ಯಂತ ಮೇ ೧೨ರಂದು ಯುದ್ದದಂತಹ ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಬಗ್ಗೆ  ಅಣುಕು ಪ್ರದರ್ಶನ ಹಮ್ಮಿಕೊಂಡಿರುವುದರಿಂದ ಭಟ್ಕಳ (Bhatkal) ಶಹರ ಠಾಣೆ ವ್ಯಾಪ್ತಿಯಲ್ಲೂ ಬ್ಲ್ಯಾಕ್‌ ಔಟ್‌ (blackout) ಕಾರ್ಯಾಚರಣೆ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೇಂದ್ರ ಸರ್ಕಾರದ ಗೃಹ ಸಚಿವಾಲಯ ರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ರಕ್ಷಣಾ ಮಾದರಿ ಅಭ್ಯಾಸವನ್ನು (Civil Defense Mock Exercise) ನಡೆಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ನಾಗರಿಕ ರಕ್ಷಣಾ ಮಾದರಿ ಅಭ್ಯಾಸವನ್ನು ಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಯುದ್ದದಂತಹ ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಅಣುಕು ಪ್ರದರ್ಶನವನ್ನು ಮೇ ೧೨ರಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ : Hanuman idol / ೪೧ ಅಡಿ ಬೃಹತ್ ಹನುಮಂತ ಮೂರ್ತಿ ಲೋಕಾರ್ಪಣೆ

ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಮೇ ೧೨ರಂದು ರಾತ್ರಿ ೭.೩೦ರಿಂದ ೮ ಗಂಟೆಯವರೆಗೆ ಬ್ಲ್ಯಾಕ್‌ ಔಟ್‌ (blackout) ಕಾರ್ಯಾಚರಣೆ ಕೈಗೊಳ್ಳಲಾಗಿದೆ.  ಬ್ಲ್ಯಾಕ್ ಔಟ್ ಎಂದರೆ ಯುದ್ದ/ತುರ್ತು ಸಂದರ್ಭಗಳಲ್ಲಿ ದೀಪಗಳು ಮತ್ತು ಇತರೆ ಬೆಳಕಿನ ವಿದ್ಯುತ್ ಉಪಕರಣಗಳನ್ನು ಆಫ್ ಮಾಡುವ ಕ್ರಿಯೆಯಾಗಿದೆ.

ಇದನ್ನೂ ಓದಿ : accused arrested/ ೧೫ ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ

ಬ್ಲ್ಯಾಕ್‌ಔಟ್ ಕ್ರಮಗಳ ಸೂಚನೆಗಳು (ವಾಯು ದಾಳಿ ಎಚ್ಚರಿಕೆ ಸೈರನ್‌ಗಳನ್ನು ನಿಮಗೆ ಕೇಳಿದ ತಕ್ಷಣ ನೀವು ಮಾಡಬೇಕಾಗಿರುವುದು) :

೧. ಎಲ್ಲಾ ಕಿಟಕಿಗಳನ್ನು ಮುಚ್ಚಿ ಹಾಗೂ ಕಿಟಕಿಗಳ ಮೇಲೆ ಪರದೆಗಳನ್ನು ಇಳಿಸಿ ಅಥವಾ ಬೈಂಡ್‌ಗಳನ್ನು ಹಾಕಿ.

೨. ಕಿಟಕಿಗಳಿಗೆ ಬ್ಲ್ಯಾಕ್‌ಔಟ್ ವಸ್ತುಗಳಿಂದ ಮುಚ್ಚಿ ಅಥವಾ ಅಗತ್ಯವಿದ್ದರೆ ಕಪ್ಪು ಬಣ್ಣ ಬಳಸಿ.

೩. ನಿಮ್ಮ ಸುತ್ತಮುತ್ತಲಿನ ಎಲ್ಲಾ ಬೆಳಕುಗಳು, ಬೀದಿ ದೀಪಗಳು ಹಾಗೂ ಅಗತ್ಯವಿಲ್ಲದ ಒಳಗಡೆ ಬೆಳಕುಗಳನ್ನು ಆರಿಸಿ.

೪. ಅವಶ್ಯಕ ಬೆಳಕುಗಳನ್ನು ಶೀಲ್ಡ್ ಮಾಡಬೇಕು ಅಥವಾ ಕ್ಷೀಣ/ಮಂದ ಬೆಳಕಿನಲ್ಲಿ ಇರಿಸಬೇಕು.

೫. ಬೆಳಕನ್ನು ಹೊರಹಾಕುವ ಬಾಗಿಲು, ಕಿಟಕಿ, ಗೂಡು ಇತ್ಯಾದಿಗಳನ್ನು ಸಂಪೂರ್ಣವಾಗಿ ಮುಚ್ಚಿ.

ಇದನ್ನೂಓದಿ: Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಸಿವಿಲ್ ಡಿಫೆನ್ಸ್ ಮಾಕ್ ಎಕ್ಸಸೈಜ್ ಅಭ್ಯಾಸಗಳು ನಾಗರಿಕರ ಮತ್ತು ಮೂಲಸೌಕರ್ಯಗಳ ರಕ್ಷಣೆಗೆ ಸಹಕಾರಿಯಾಗುವಷ್ಟೇ ಅಲ್ಲದೆ, ಪ್ರತಿಕ್ರಿಯೆಯ ಸಮಯ ಮತ್ತು ಸಮನ್ವಯತೆಯನ್ನು ಸುಧಾರಿಸಲು ಹಾಗೂ ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳನ್ನು ಬಲಪಡಿಸಲು ಸಹಾಯಕವಾಗುತ್ತವೆ. ಆದ್ದರಿಂದ ಎಲ್ಲಾ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : foundation day/ ಕಸಾಪ ಸಂಸ್ಥಾಪನಾ ದಿನಾಚರಣೆ