ಭಟ್ಕಳ(Bhatkal): ಜನತಾ ಕೋಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಮಂಡಳಿಯ ಸದಸ್ಯರು ಕರಿಕಲ್ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ (Brahmanand Saraswati Shree) ಆಶಿರ್ವಾದ ಮಂತ್ರಕ್ಷತೆ ಪಡೆದರು (Blessed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಕರಿಕಲ್ ದ್ಯಾನ ಮಂದಿರದಲ್ಲಿ ಕನ್ಯಾಡಿ ಧರ್ಮಸ್ಥಳದ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜನತಾ ಕೋ ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ನಿರ್ದೇಶಕಕ ಮಂಡಳಿಯ ಸದಸ್ಯರು ಶ್ರೀಗಳ ಬಳಿ ತೆರಳಿ ಆಶಿರ್ವಾದದ ಮಂತ್ರಾಕ್ಷತೆ ಪಡೆದರು(Blessed). ಜನತಾ ಕೋ ಆಪರೇಟಿವ್‌ ಸೊಸೈಟಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶ್ರೀಗಳು ಆಶಿರ್ವಾದ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ಕೃಷ್ಣಾ ನಾಯ್ಕ, ಕೆ.ಪಿ. ಪೈ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಗೊಯ್ದ ಗೊಂಡ, ಅಲ್ಬರ್ಟ ಡಿಕೋಸ್ತಾ, ಪ್ರಧಾನ ವ್ಯವಸ್ಥಾಪಕ ನಾಗೇಶ ದೇವಡಿಗ ಇದ್ದರು.

ಇದನ್ನೂ ಓದಿ : ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್‌ ಕೊಡುಗೆ

ಮಲ್ಲಾರಿ, ಕೋಕ್ತಿ ೧ ಮತ್ತು ಕೋಕ್ತಿ ೨ ಕೂಟದ ನಾಮಧಾರಿ ಸಮಾಜ ಬಾಂಧವರಿಂದ ಶ್ರೀಗಳಿಗೆ ಪಾದಪೂಜೆ ನೇರವೇರಿಸಲಾಯಿತು. ಬಳಿಕ ಸಹಸ್ರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಬೋಜನ ಸ್ವೀಕರಿಸಿದರು. ಸಂಜೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ, ಅಳಿವೆಕೋಡಿ ಸಣಬಾವಿ ತಂಡದ ಭಜನೆ ಭಕ್ತರ ಮನಸೂರೆಗೊಂಡಿತು.

ಇದನ್ನೂ ಓದಿ : ದೇವರು ನೀಡುವ ಆಶೀರ್ವಾದ ಗುರು: ರಾಘವೇಶ್ವರ ಶ್ರೀ