ಭಟ್ಕಳ (Bhatkal) : ತಾಲೂಕಿನ ಜಾಗೃತ ಸ್ಥಳಗಳಲ್ಲಿ ಒಂದಾಗಿರುವ ಶಿರಾಲಿಯ ಶ್ರೀ ಹಾದಿಮಾಸ್ತಿ ಜಟ್ಟ ಮಾಸ್ತಿ ದೇವಸ್ಥಾನದ ಕ್ಷೇತ್ರ ಪರಿಚಯದ ಕುರಿತು ಸಾಹಿತಿ ಶ್ರೀಧರ ಶೇಟ ಶಿರಾಲಿ ರಚಿಸಿರುವ ”ಶಿರಾಲಿಯ ಶಕ್ತಿ – ಶ್ರೀ ಹಾದಿ ಮಾಸ್ತಿ” ಪುಸ್ತಕವನ್ನು ವರ್ಧಂತಿ ಉತ್ಸವದ ದಿನದಂದು ಲೋಕಾರ್ಪಣೆ (Book release) ಮಾಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಆರ್ ನರಸಿಂಹಮೂರ್ತಿ ಕೃತಿಯನ್ನು ಬಿಡುಗಡೆಗೊಳಿಸಿ (Book release) ಮಾತನಾಡಿದರು. ಯುವಜನಾಂಗವು ನಮ್ಮ ಇತಿಹಾಸ – ಪರಂಪರೆ -ಸಂಸ್ಕೃತಿಯನ್ನು ತಿಳಿದುಕೊಳ್ಳಲು ಇಂಥ ಕೃತಿಗಳಿಂದ ಸಾಧ್ಯ ಎಂದು ಅವರು ಹೇಳಿದರು.
ಇದನ್ನೂ ಓದಿ: Readers letter/ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ತಾತ್ಸಾರವೇಕೆ?
ಕೃತಿಯ ಲೇಖಕ ಶ್ರೀಧರ ಶೇಟ ಶಿರಾಲಿ ಮಾತನಾಡಿ, ದೇವಸ್ಥಾನದ ಹಿನ್ನೆಲೆ, ಇತಿಹಾಸ, ಉತ್ಸವಗಳು ಮತ್ತು ಶಿರಾಲಿಯ ಶಬ್ದದ ವ್ಯುತ್ಪತ್ತಿಯ ಬಗ್ಗೆ ವಿವರಗಳನ್ನು ಪುಸ್ತಕವು ಒಳಗೊಂಡಿದೆ ಎಂದರು. ಆಡಳಿತ ಮಂಡಳಿ ಮತ್ತು ಅರ್ಚಕ ವೃಂದದ ಸಹಕಾರವನ್ನು ಅವರು ಸ್ಮರಿಸಿಕೊಂಡರು.
ವಿಡಿಯೋ ಸಹಿತ ಇದನ್ನೂ ಓದಿ: Under Pass/ ಗ್ರಾಮಸ್ಥರಿಂದ ಸಂಸದ ಕಾಗೇರಿ ತರಾಟೆಗೆ
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್. ಕೆ. ನಾಯ್ಕ ಮಾತನಾಡಿ, ಐದು ನೂರಕ್ಕೂ ಹೆಚ್ಚು ವರ್ಷಗಳ ದೀರ್ಘ ಇತಿಹಾಸವಿರುವ ದೇವಸ್ಥಾನದ ಕುರಿತು ಅಧಿಕೃತ ದಾಖಲೆ ಇರಲಿಲ್ಲ. ಈ ಕೃತಿಯಿಂದ ಆ ಕೊರತೆ ನೀಗಿದಂತಾಗಿದೆ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ: Mari Jathre/ ಮನೆಯ ಹಬ್ಬವಾಗಿಸುವ ಮಾರಿ ಜಾತ್ರೆ
ವೇದಿಕೆಯ ಮೇಲೆ ದೇವಸ್ಥಾನ ಆಡಳಿತ ಸಮಿತಿ ಉಪಾಧ್ಯಕ್ಷ ದೇವಿದಾಸ ಮಹಾಲೆ, ಕಾರ್ಯದರ್ಶಿ ರಾಮ ನಾಯ್ಕ, ಖಜಾಂಚಿ ಶ್ರೀನಿವಾಸ ಕಾಮತ, ಸದಸ್ಯರಾದ ವೆಂಕಟೇಶ ನಾಯ್ಕ, ರಾಜೇಶ ಮೊಗೇರ, ದಿ. ವೆಂಕಟೇಶ ಪ್ರಭು ಕುಟುಂಬದ ರಾಮದಾಸ ಪ್ರಭು ಮತ್ತು ಅರ್ಚಕ ಸುಬ್ರಾಯ ಭಟ್ಟ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನು ಓದಿ : ಅಳಿವೆಕೋಡಿಯಲ್ಲಿ ಮಾರಿ ಜಾತ್ರೆ ವೈಭವ
ಈ ಸಂದರ್ಭದಲ್ಲಿ ಕೃತಿ ರಚಿಸಿದ ಶ್ರೀಧರ ಶೇಟ ಶಿರಾಲಿ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಡಿಯೋ ಸಹಿತ ಇದನ್ನೂ ಓದಿ: Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ