ಭಟ್ಕಳ (Bhatkal) : ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಆಟೋ ರಿಕ್ಷಾದಿಂದ (autorikshaw) ಕೆಳಗೆ ಬಿದ್ದ ಬಾಲಕನ ತಲೆಗೆ ಒಳಪೆಟ್ಟು ತಗುಲಿದ (Boy injured) ಘಟನೆ ಇಂದು ಸಾಯಂಕಾಲ ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೇಂಗ್ರೆ ಸಣಬಾವಿಯ‌ ಹೊನ್ನಿಮನೆ ನಿವಾಸಿ ರೋಹಕ್ ದಯಾನಂದ ಮೊಗೇರ (೧೧) ಗಾಯಗೊಂಡವ. ಈತ ತನ್ನ ತಾಯಿ ಶೋಭಾ ಮತ್ತು ಅಜ್ಜ ನಾರಾಯಣ ಶನಿಯಾರ ಮೊಗೇರ ಜೊತೆ ಬಾಡಿಗೆ ಆಟೋ ರಿಕ್ಷಾದಲ್ಲಿ ಶಿರಾಲಿಯಿಂದ ಮನೆಗೆ ತೆರಳುತ್ತಿದ್ದ.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ಪೊಲೀಸರ ಮತ್ತೊಂದು ಕ್ಷಿಪ್ರ ಕಾರ್ಯಾಚರಣೆ

ಆಟೋ ರಿಕ್ಷಾ ಚಾಲಕನು ತನ್ನ ಆಟೋ ರಿಕ್ಷಾವನ್ನು ಅತಿ ವೇಗ ಹಾಗೂ ದುಡುಕಿನಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಆಟೋ ರಿಕ್ಷಾಗೆ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಆಟೋ ರಿಕ್ಷಾದಲ್ಲಿದ್ದ ರೋಹಕ್ ತನ್ನ ನಿಯಂತ್ರಣ ತಪ್ಪಿ ಆಟೋ ರಿಕ್ಷಾದಿಂದ ಒಮ್ಮೇಲೆ ಕೆಳಗೆ ಬಿದ್ದಿದ್ದಾನೆ. ಪರಿಣಾಮ‌ ತಲೆಗೆ ಒಳಪೆಟ್ಟು ತಗುಲಿದೆ (Boy injured) ಎಂದು ಬಾಲಕನ ಚಿಕ್ಕಮ್ಮ ಶೋಭಾ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಕೆರೆಗೆ ಹಾರಿ ಸೊರಬದ ಯುವತಿ ಆತ್ಮಹತ್ಯೆ