ಭಟ್ಕಳ (Bhatkal): ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಕೊನೆಯ ದಿನದ ಸೀಮೋಲ್ಲಂಘನ (Seemollanghana) ಕಾರ್ಯಕ್ರಮ ಶುಕ್ರವಾರ, ಆ.೩೦ರಂದು ಹಮ್ಮಿಕೊಳ್ಳಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಿಗ್ಗೆ ೯ ಗಂಟೆಗೆ ಕರಿಕಲ್ ಧ್ಯಾನ ಮಂದಿರದಿಂದ ಶ್ರೀಗಳನ್ನು ಮೆರವಣಿಗೆಯಲ್ಲಿ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಶ್ರೀ ಹನುಮಂತ ದೇವರಿಗೆ ಪೂಜೆಯ ನಂತರ ಸಾರದಹೊಳೆ ನದಿ ತೀರದಲ್ಲಿ ೧೧-೩೦ಕ್ಕೆ ಗಂಟೆಗೆ ಗಂಗಾಪೂಜೆ ಕಾರ್ಯಕ್ರಮ ನಡೆಯುವುದು. ನಂತರ ಅಲ್ಲಿಂದ ಪುನಃ ಭಟ್ಕಳದ ಕರಿಕಲ್ ಧ್ಯಾನ ಮಂದಿರಕ್ಕೆ ಸ್ವಾಮೀಜಿಗಳನ್ನು ಕರೆತರಲಾಗುವುದು (Seemollanghana).
ಇದನ್ನೂ ಓದಿ : ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ
ಮಧ್ಯಾಹ್ನ ೧೨ ಗಂಟೆಗೆ ಕರಿಕಲ್ ಧ್ಯಾನ ಮಂದಿರದಲ್ಲಿ ಸ್ವಾಮೀಜಿಯವರ ಪಾದಪೂಜೆಯ ನಂತರ ಬೃಹತ್ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಸಾಧು ಸಂತರ ಮಂಡಲಾಧ್ಯಕ್ಷರಾದ ಈರ್ವರು ಸ್ವಾಮೀಜಿಗಳು ಹಾಗೂ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಚಾತುರ್ಮಾಸ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ವಿದ್ಯಾಂಜಲಿ ಶಾಲೆಯಲ್ಲಿ ಗೋಕುಲಾಷ್ಟಮಿ ಸಂಭ್ರಮೋತ್ಸವ