ಭಟ್ಕಳ: ಮನುಷ್ಯನು ತಾನು ಶ್ರೇಷ್ಠ ಎಂಬ ಮೋಹ ಬಿಟ್ಟರೆ ಮಾತ್ರ ಭಕ್ತಿಯ ಮಹತ್ವ ತಿಳಿಯುತ್ತದೆ ಎಂದು ದರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanandshree) ನುಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಅವರು ಭಟ್ಕಳ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುಮಾಸ್ಯ ವೃತಾಚರಣೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದ ಭಕ್ತರಿಗೆ ಆಶೀರ್ವಚನೆ ನೀಡಿದರು.
ಮನುಷ್ಯನಾದವನು ತನ್ನ ಧರ್ಮವನ್ನು ಸರಿಯಾಗಿ ಪಾಲಿಸಬೇಕು. ಮಠ ಮಾನ್ಯವನ್ನು ಬೆಳೆಸುವ ಕಾರ್ಯ ಮಾಡುವ ಜೊತೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯವನ್ನು ಈಹಿಂದೆ ಹಿಂದೆ ಮೇಲ್ವರ್ಗದವರಷ್ಟೆ ಮಾಡುತ್ತಿದ್ದರು. ಆದರೆ ಈಗ ಹಿಂದುಳಿದ ವರ್ಗದವರು ಕೂಡ ಧಾರ್ಮಿಕ ಕಾರ್ಯ ಕೈಗೊಳ್ಳುವ ಮೂಲಕ ಅವರಿಗೂ ಸಮಾಜದಲ್ಲಿ ಶಿಸ್ತು, ಗೌರವ ಪ್ರಾಪ್ತವಾಗುವಂತಾಗಿದೆ.. ಜನರು ಸಂಸ್ಕಾರವನ್ನು ಪಾಲಿಸಬೇಕೆಂಬ ಸದುದ್ದೇಶದಿಂದಲೇ ಈ ಚಾತುರ್ಮಾಸ್ಯ ಮಾಡುತ್ತಿದ್ದೇವೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanandshree) ನುಡಿದರು.

ಇದನ್ನೂ ಓದಿ :  ಆಗಸ್ಟ್‌ ೩ರಂದು ವಿವಿಧೆಡೆ ಅಡಿಕೆ ಧಾರಣೆ

ಈ ಸಂದರ್ಭದಲ್ಲಿ ಶಿರಸಿ ಶಾಸಕ ಬೀಮಣ್ಣ ನಾಯ್ಕ ಆಗಮಿಸಿ, ಶ್ರೀ ಬ್ರಹ್ಮಾನಂದ ಸರಸ್ವತಿ ಶ್ವಾಮೀಜಿಗಳಿಂದ ಮಂತ್ರಾಕ್ಷತೆ ಪಡೆದರು. ಸ್ವಾಮೀಜಿಗಳು ಶಾಸಕರಿಗೆ ಸಾಲು ಹೊದಿಸಿ ಗೌರವಿಸಿದರು. ಮಂಕಿ ಬ್ಲಾಕ್‌ ಅಧ್ಯಕ್ಷ ಗೋವಿಂದ ನಾಯ್ಕ, ಪ್ರಮುಖರಾದ ಆರ್.ಜಿ.ನಾಯ್ಕ ಕುಮಟಾ, ಕುಮಟ ತಾಲೂಕು ನಾಮಧಾರಿ ಅಧ್ಯಕ್ಷ ಮಂಜುನಾಥ ನಾಯ್ಕ, ಶ್ರೀನಿವಾಸ ನಾಯ್ಕ ಶಿರಸಿ ಮತ್ತಿತರರು ಉಪಸ್ಥಿತರಿದ್ದರು. ೧೨ ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಿನ ನಾಮಧಾರಿ ಸಮಾಜದ ಭಕ್ತರು ಹೊರೆಕಾಣಿಕೆ ನೀಡಿ ಒಂದು ದಿನದ ಸೇವೆಯಲ್ಲಿ ಸಲ್ಲಿಸಿದರು.