ಭಟ್ಕಳ (Bhatkal) : ೧೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮುರ್ಡೇಶ್ವರ (Murdeshwar) ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ (accused arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yallapur) ತಾಲೂಕಿನ ರಾಮಚಂದ್ರ ಸುಬ್ರಹ್ಮಣ್ಯ ನಾಯ್ಕ (೫೦) ಬಂಧಿತ ಆರೋಪಿ. ೨೦೦೩ರ ಪ್ರಕರಣದ ಆರೋಪಿಯಾಗಿದ್ದ ರಾಮಚಂದ್ರ ನಾಯ್ಕನನ್ನು ಪತ್ತೆಹಚ್ಚಲು ಪೊಲೀಸರು ಹೈದರಾಬಾದ್‌ (Hyderabad), ಬೆಂಗಳೂರು (Bengaluru), ವಿಜಯಪುರ (Vijayapur) ಮತ್ತಿತರ ಕಡೆಗಳಲ್ಲಿ ಮಾಹಿತಿ ಕಲೆ ಹಾಕಿದ್ದರು. ಮೇ ೧೦ರಂದು ವಿಜಯಪುರದ ವಿವೇಕ ನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ (accused arrested) ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ : Murdeshwar/ ಮುರ್ಡೇಶ್ವರದ ವ್ಯಕ್ತಿಯ ಹಣ ದೋಚಿದ ಕಳ್ಳರು

ಸದ್ರಿ ಪ್ರಕರಣದಲ್ಲಿ ಆರೋಪಿತನ ಪತ್ತೆಗೆ ಪೊಲೀಸ್‌ ಅಧೀಕ್ಷಕ ನಾರಾಯಣ ಎಂ., ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ.,  ಜಗದೀಶ ಎಂ., ಭಟ್ಕಳ ಪೊಲೀಸ್‌ ಉಪಾಧೀಕ್ಷಕ ಮಹೇಶ ಎಮ್. ಮತ್ತು ಭಟ್ಕಳ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮಾರ್ಗದರ್ಶನ ನೀಡಿದ್ದರು. ಮುರ್ಡೇಶ್ವರ (Murudeshwar) ಪೊಲೀಸ್‌ ಠಾಣೆ ಉಪ ನಿರೀಕ್ಷಕ ಹಣಮಂತ ಬಿರಾದಾರ ನೇತೃತ್ವದಲ್ಲಿ ಸಿಪಿಸಿಗಳಾದ ಮಂಜುನಾಥ ಲಕ್ಕಾಪುರ,  ವಿಜಯ ನಾಯ್ಕ, ಮಂಜುನಾಥ ಮಡಿವಾಳರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : foundation day/ ಕಸಾಪ ಸಂಸ್ಥಾಪನಾ ದಿನಾಚರಣೆ