ಭಟ್ಕಳ (Bhatkal): ಹೊಸದಾದ ಬೊಲೆರೊ (B0lero) ವಾಹನವೊಂದು ಅಂಬುಲೆನ್ಸ್‌ಗೆ (Ambulance) ಮುಖಾಮುಖಿ ಡಿಕ್ಕಿಯಾದ ಘಟನೆ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೊಲೆರೊ ವಾಹನ ಚಾಲಕ ಮಹಾರಾಷ್ಟ್ರದ (Maharashtra) ಸತಾರಾ ನಿವಾಸಿ ರಾಜೇಶ ವಿಲಾಸ ಸಾಲುಂಕೆ (೩೧) ವಿರುದ್ಧ ದೂರು ದಾಖಲಾಗಿದೆ. ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡ ಬಂದಿರುವುದಾಗಿ ಆರೋಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಎದುರಿನಿಂದ ಬರುತ್ತಿದ್ದ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಂಬುಲೆನ್ಸ್‌ಗೆ ಹಾನಿಯಾಗಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಕ್ಲಿನಿಕ್ ಗಳ ಮೇಲೆ ದಾಳಿ

ಆರೋಪಿ ಚಾಲಕನಿಗೂ ಚಿಕ್ಕಪುಟ್ಟ ಗಾಯವಾಗಿದೆ. ಈ ಕುರಿತು ಅಂಬುಲೆನ್ಸ್‌ (Ambulance) ಚಾಲಕ, ಕುಮಟಾ ಹೆರವಟ್ಟಾದ ಚಂದ್ರಹಾಸ ನಾರಾಯಣ ಗೌಡ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !