ಹೊನ್ನಾವರ (Honnavar) : ಬೆಂಗಳೂರಿನಿಂದ (Bengaluru) ಹೊನ್ನಾವರ (Honnavar) ಕಡೆ ಬರುತ್ತಿದ್ದ ಖಾಸಗಿ ಬಸ್‌ ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿ (Bus Overturned) ೨೨ ಜನರಿಗೆ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ ೭.೩೦ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಸ್ಸಿನಲ್ಲಿದ್ದವರೆಲ್ಲ ಬೆಂಗಳೂರಿನವರು ಎಂದು ಗೊತ್ತಾಗಿದೆ. ೧೫ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ೧೦ ಜನರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ೧೦ ಜನರಿಗೆ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.  ಚಾಲಕನ ನಿರ್ಲಕ್ಷ್ಯತನದಿಂದ ಬಸ್‌ ಪಲ್ಟಿಯಾಗಿದೆ (Bus Overturned) ಎಂದು ಆರೋಪಿಸಲಾಗಿದೆ. ಚಾಲಕ ಸೇರಿ ೨೨ ಜನರು ಬಸ್ಸಿನಲ್ಲಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ :   ಭಟ್ಕಳ ಸಾಹಿತ್ಯ ಸಮ್ಮೇಳನ ಮುಂದೂಡಿಕೆ