ಭಟ್ಕಳ (Bhatkal) : ಅಕೌಂಟ್ಸ್ ಹಬ್ (accounts hub) ಎಂದು ಪ್ರಖ್ಯಾತ ವಾಗಿರುವ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (sudhindra college) ಸಿಎ (CA), ಸಿಎಸ್ (CS) ಪೂರೈಸಿದ ಹಳೆಯ ವಿದ್ಯಾರ್ಥಿಗಳು ಹಾಗೂ ತರಬೇತಿ ಸಂಸ್ಥೆಗಳ ಮಾರ್ಗದರ್ಶನ, ಸಹಕಾರದೊಂದಿಗೆ ಹಲವಾರು ವಿದ್ಯಾರ್ಥಿಗಳು ಬಿಕಾಂ ಜೊತೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (chartered account), ಕಂಪನಿ ಸೆಕ್ರೇಟರಿ (company secretary) ಪ್ರೊಫೆಷನಲ್ ಕೋರ್ಸ (professional course) ಕಲಿಯುತ್ತಿದ್ದಾರೆ. ಸಿ.ಎಸ್.ಇ.ಇ.ಟಿ., ಸಿ.ಎ. ಫೌಂಡೇಶನ್ ಅನ್ನು ಪೂರೈಸಿ ಮುಂದಿನ ಹಂತದ ಸಿ.ಎಸ್ – ಎಕ್ಸಿಕೂಟಿವ್, ಸಿ.ಎ-ಇಂಟರ್ಮೀಡಿಯಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇದೀಗ ಬಿಕಾಂ ಜೊತೆಯಲ್ಲಿ ಸಿಎ, ಸಿಎಸ್ ಅನ್ನು ಆನಲೈನ್, ಹೈಬ್ರಿಡ್, ಆಫ್ಲೈನ್ ಮೂಲಕ ಅಧ್ಯಯನ ಮಾಡಲು ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಉಡುಪಿ ಜಿಲ್ಲೆಯ “ವಿ- ರೀಚ್ ಅಕಾಡೆಮಿ” ೨ ಮೇ ೨೦೨೫, ಶುಕ್ರವಾರದಂದು ಬೆಳಿಗ್ಗೆ ೧೦ ಗಂಟೆಗೆ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಇನ್ಫೋಸಿಸ್ ಸೆಮಿನಾರ್ ಹಾಲ್ ನಲ್ಲಿ ಮಾಹಿತಿ ಕಾರ್ಯಾಗಾರ ನಡೆಸಿಕೊಡಲಿದೆ. ಸಿಎ, ಸಿಎಸ್ ಕೋರ್ಸ್ ಮಾಹಿತಿ, ದಾಖಲಾತಿ, ಅವಕಾಶಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಶ್ರೀ ಗುರು ಸುಧೀಂದ್ರ ಕಾಲೇಜಿನ (sudhindra college) ಪ್ರೊಫೆಷನಲ್ ಕೋರ್ಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಪಿ.ಎಸ್. ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : media cup/ ಗೆದ್ದು ಬೀಗಿದ ಭಟ್ಕಳ ಪತ್ರಕರ್ತರು