ಸಿದ್ದಾಪುರ(Siddapur) : ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಶೆಡ್ನಲ್ಲಿಟ್ಟಿದ್ದ ಅಡಿಕೆ ಕದ್ದೊಯ್ದಿರುವ (Arecanut stolen) ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಇಟಗಿ ಆಲದಕಟ್ಟೆಯಲ್ಲಿ ಕಳ್ಳತನ ನಡೆದಿದೆ. ಅಡಿಕೆ ವ್ಯಾಪಾರಿ ಮಹಮ್ಮದ್ ಶಫಿ ಅಬ್ದುಲ್ ಅಜೀಂ ಸಾಬ್ (೨೭) ಎಂಬುವವರ ಅಡಿಕೆ ಕಳವು ಮಾಡಲಾಗಿದೆ. ಮನೆಯ ಎದುರಿನ ಶೆಡ್ನಲ್ಲಿದ್ದ ೬೦ ಕೆಜಿ ತೂಕದ ಚಾಲಿ ಅಡಿಕೆಯ ನಾಲ್ಕು ಚೀಲಗಳನ್ನು ಕಳವು ಮಾಡಲಾಗಿದೆ. ಒಟ್ಟು ೨ ಕ್ವಿಂಟಲ್ ೪೦ ಕೆಜಿ ತೂಕದ ಅಂದಾಜು ೨೭ ಸಾವಿರ ರೂ. ಮೌಲ್ಯದ ಅಡಿಕೆ ಕಳ್ಳತನವಾಗಿದೆ. ಸೆ.೨ರಂದು ಬೆಳಗಿನ ಜಾವ ೨ರ ಸುಮಾರಿಗೆ ಸ್ಪ್ಲೆಂಡರ್ ಬೈಕಿನಲ್ಲಿ ಬಂದ ಇಬ್ಬರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಮುಖಂಡನ ಮೇಲೆ ಹಲ್ಲೆ; ಓರ್ವ ವಶಕ್ಕೆ