ಭಟ್ಕಳ: ತಾಲೂಕಿನ ಮುರುಡೇಶ್ವರ (Murudeshwar) ವಾಕರಸಾ ಸಂಸ್ಥೆಯ ಬಸ್ ನಿಲ್ದಾಣದ (NWKRTC Bus Stand) ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ (Car Bike Collision) ಇಬ್ಬರು ಗಾಯಗೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉಡುಪಿ (Udupi) ಜಿಲ್ಲೆಯ ಕುಂದಾಪುರ (Kundapur) ಮೂಲದ ಪ್ರದೀಪ ಸುರೇಶ್ ಶೆಟ್ಟಿ ಚಾಲನೆ ಮಾಡುತ್ತಿದ್ದ ಕಾರು, ದುಡುಕಿನ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಬಲಭಾಗದ ರಸ್ತೆಗೆ ನುಗ್ಗಿ, ಎದುರು ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ (Car Bike Collision). ಅಪಘಾತದಲ್ಲಿ ಬೈಕ್ ಸವಾರ ಈಶ್ವರ ದೇವಡಿಗ ಬಲಕೈಗೆ ಗಾಯವಾಗಿದ್ದು, ಹಿಂಬದಿ ಸವಾರ ಮಂಜು ದೇವಡಿಗ ಬಲಕಾಲಿಗೆ ಗಾಯ ಗಾಯವಾಗಿದೆ. ಅವರಿಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಗಾಯಾಳು ಈಶ್ವರ ದುಗ್ಗಯ್ಯ ದೇವಡಿಗ ಮುರುಡೇಶ್ವರ (Murudeshwar) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (Case Filed)Muru.
ಇದನ್ನೂ ಓದಿ: Two arrested/ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ



