ಭಟ್ಕಳ (Bhatkal) : ಕಾರೊಂದು ಡಿಕ್ಕಿ ಹೊಡೆದು (Car Collision) ಬೈಕ್ ಸವಾರರಿಬ್ಬರು (Bike riders) ಗಂಭೀರ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರ (Murdeshwar) ಬಸ್ತಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Nationa Highway) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ (Honnavar) ತಾಲೂಕಿನ ಉಪ್ಪೋಣಿ ಹುಕ್ಕೊಳ್ಳಿ ನಿವಾಸಿಗಳಾದ ಬೈಕ್ ಸವಾರ ವಿಠ್ಠಲ ಪುರಸಯ್ಯ ಮರಾಠಿ ಮತ್ತು ಹಿಂಬದಿ ಸವಾರ ಗಣಪತಿ ನಾರಾಯಣ ಮರಾಠಿ ಗಾಯಗೊಂಡವರು. ಇಬ್ಬರನ್ನೂ ಮಣಿಪಾಲದ (Manipal) ಕಸ್ತೂರ್ಬಾ ಆಸ್ಪತ್ರೆಗೆ (Kasturba Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ತಲೆಗೆ ತೀವ್ರ ಗಾಯಗೊಂಡಿರುವ ವಿಠ್ಠಲ ಪುರಸಯ್ಯ ಮರಾಠಿ ಸ್ಥಿತಿ ಚಿಂತಾಜನಕವಾಗಿದ್ದು, ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Panchganga Express/ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ೫ರ ಸಂಭ್ರಮ
ಮಾ.೧೨ರಂದು ರಾತ್ರಿ ೯.೩೦ರ ಸುಮಾರಿಗೆ ಈ ಘಟನೆ ನಡೆದಿದೆ. ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೊರಟಿದ್ದ ಬೈಕಿಗೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ (Car Collision). ಕಾರು (ನಂಬರ ಕೆಎ-೨೦/ಎಮ್‌ಸಿ-೩೩೨೬) ಚಾಲಕನ ವಿರುದ್ಧ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ಉಪ್ಪೋಣಿಯ ತುಕಾರಾಮ ಕೃಷ್ಣ ಮರಾಠಿ ಎಂಬುವವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : Tanker Collision/ ಟ್ಯಾಂಕರ್ ಡಿಕ್ಕಿಯಾಗಿ ಮೀನುಗಾರ ಗಂಭೀರ