ಭಟ್ಕಳ (Bhatkal) : ಕಾರು ಡಿಕ್ಕಿಯಾಗಿ (car crash) ರಸ್ತೆ ದಾಟುತ್ತಿದ್ದ ಅಪರಿಚಿತ ಮೃತಪಟ್ಟ ಘಟನೆ ಮುರ್ಡೇಶ್ವರದ (Murudeshwar) ಜನತಾ ಕಾಲೋನಿ ಬಳಿ ನಿನ್ನೆ ಡಿ.೭ರಂದು ಸಂಜೆ ೭.೧೫ಕ್ಕೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ಕಡೆಯಿಂದ ಹೊನ್ನಾವರ (Honnavar) ಕಡೆಗೆ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಅತಿ ವೇಗವಾಗಿ ಹೋಗುತ್ತಿದ್ದ ಕಾರು ರೈಲ್ವೆ ನಿಲ್ದಾಣ ಕಡೆಯಿಂದ ಜನತಾ ಕಾಲೋನಿ ಕಡೆಗೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ (car crash). ಸುಮಾರು ೫೫-೬೦ ವರ್ಷ ವಯಸ್ಸಿನ ಪಾದಚಾರಿ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಚಾಲಕ ಮುರ್ಡೇಶ್ವರದ (Murdeshwar) ನ್ಯಾಶನಲ್ ಕಾಲೋನಿ ನಿವಾಸಿ ಅಫ್ತಾಬ್ ಆಲಂ ಧಿಂಡಾ (೪೮) ವಿರುದ್ಧ ದೂರು (Complaint) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಮುರ್ಡೇಶ್ವರ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರ ಬಗ್ಗೆ ಮಾಹಿತಿ ಇದ್ದವರು ಅಥವಾ ಸುಳಿವು ಸಿಕ್ಕಲ್ಲಿ ಮುರ್ಡೇಶ್ವರ ಠಾಣೆ ಸಂಪರ್ಕಿಸಬಹುದಾಗಿದೆ.
ಇದನ್ನೂಓದಿ : ಗುಡುಗು-ಸಿಡಿಲಿನ ಅಬ್ಬರಕ್ಕೆ ಯುವಕ ಬಲಿ