ಭಟ್ಕಳ (Bhatkal): ಮನೆಯಿಂದ ಎಲ್ಲಿಯೋ ಹೋದವರು ಇಲ್ಲಿನ ಅಳ್ವೆಕೋಡಿ (Alvekodi) ಬಂದರಿನಲ್ಲಿ ಕಾರು ಬಿಟ್ಟು ನಾಪತ್ತೆಯಾಗಿರುವ ಬಗ್ಗೆ (missing) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರಿನ (Ranebennur) ನಿವಾಸಿ ನವೀನಕುಮಾರ ಬಸವರಾಜ ಗೊಂಡಕರ್ (೩೪) ಕಾಣೆಯಾದವರು (missing). ಈ ಕುರಿತು ನವೀನಕುಮಾರ ಅವರ ಸಹೋದರ ಸೂರಜಕುಮಾರ ದೂರು ದಾಖಲಿಸಿದ್ದಾರೆ. ನವೀನಕುಮಾರ ಅವರು ಮೇ ೩೦ರಂದು ಬೆಳಿಗ್ಗೆ ೮.೦೫ರ ಸುಮಾರಿಗೆ ಮನೆಯಿಂದ ಎಲ್ಲಿಗೋ ಹೋಗಿದ್ದರು. ಜೂ.೨ರಂದು ಸಾಯಂಕಾಲ ೭.೩೦ರ ಸುಮಾರಿಗೆ ಫೋನ್ ಮಾಡಿದಾಗ ನಾಳೆ ಬರುತ್ತೇನೆ ಅಂತ ಹೇಳಿದ್ದರು.
ಇದನ್ನೂ ಓದಿ : money doubling fraud/ ಭಟ್ಕಳದ ವ್ಯಕ್ತಿ ವಿರುದ್ಧ ಹಣ ಡಬ್ಲಿಂಗ್ ವಂಚನೆ ಆರೋಪ
ಜೂ.೩ರಂದು ಬೆಳಿಗ್ಗೆ ೭.೩೦ರ ಸುಮಾರಿಗೆ ಭಟ್ಕಳದಿಂದ ಅಪರಿಚಿತರೊಬ್ಬರು ನವೀನಕುಮಾರ ಅವರ ಅತ್ತೆ ಮಗನಾದ ಗಗನ್ ಎಂಬುವವರಿಗೆ ಫೋನ್ ಮಾಡಿದ್ದರು. ಅಳ್ವೆಕೋಡಿ ಬಂದರ್ ಹತ್ತಿರ ಕಾರೊಂದು ನಿಂತಿದ್ದು, ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಸಿಕ್ಕಿದ್ದರಿಂದ ಫೋನ್ ಮಾಡಿರುವುದಾಗಿ ತಿಳಿಸಿದ್ದರು. ಆ ಕಾರು ನವೀನಕುಮಾರ್ ಅವರದ್ದಾಗಿದ್ದರಿಂದ ಭಟ್ಕಳದ ಅಳ್ವೆಕೋಡಿ ಬಂದರ್ ಹತ್ತಿರ ಅವರನ್ನು ಹುಡುಕಾಡಿದರೂ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : police operation/ ಭಟ್ಕಳ ಪೊಲೀಸರ ಕಾರ್ಯಾಚರಣೆ; ಐವರು ವಶಕ್ಕೆ



