ಸಿದ್ದಾಪುರ (Siddapur): ಅಂದರ್ ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ೬೧,೩೯೦ ರೂ. ನಗದು ವಶಪಡಿಸಿಕೊಂಡು, ೧೧ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ(case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಿದ್ದಾಪುರ (Siddapur) ತಾಲೂಕಿನ ತಾರೀಘಟಗಿಯ ಪ್ರಭಾಕರ ವೆಂಕಟರಮಣ ಹೆಗಡೆ ಅವರ ಮನೆ ಎದುರು ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ಪಿಎಸೈ ಗೀತಾ ಪಿ. ಶಿರ್ಶಿಕರ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು. ಮನೆ ಯಜಮಾನ ಸಹಿತ ಸಿದ್ದಾಪುರ ತಾಲೂಕಿನ ಐವರು ಮತ್ತು ಶಿರಸಿ (Sirsi) ತಾಲೂಕಿನ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ ಬಿದ್ದು ಕಾಣೆಯಾದ ವಿದೇಶಿ ಮೀನುಗಾರ
ತಾರೀಘಟಗಿಯ ಪ್ರಭಾಕರ ವೆಂಕಟ್ರಮಣ ಹೆಗಡೆ (೫೫), ಶಿರಸಿ ತಾಲೂಕಿನ ಕುಳವೆ ಕೆಂಚಗದ್ದೆಯ ರವೀಂದ್ರ ಮಂಜುನಾಥ ಹೆಗಡೆ (೬೨), ಕುಳವೆ ಬಾಳೆತೋಟದ ಕೇಶವ ನಾರಾಯಣ ಹೆಗಡೆ (೬೯), ಸಿದ್ದಾಪುರ ತಾಲೂಕಿನ ಸರ್ಕುಳಿ ಕಾರೇಗದ್ದೆಯ ಶ್ರೀಧರ ಗಜಾನನ ಹೆಗಡೆ(೫೩), ಕುಳವೆ ಕೆಂಚಗದ್ದೆಯ ಸದಾನಂದ ಗಣಪತಿ ಹೆಗಡೆ(೫೮), ಶಿರಸಿ ಫಾರೆಸ್ಟ್ ಕಾಲೋನಿಯ ಶ್ರೀಧರ ಶಂಕರ ಭಟ್ಟ(೬೦), ಸರ್ಕುಳಿ ಕೆರೆಗದ್ದೆಯ ಸುರೇಶ ನಾಗೇಶ ಭಟ್ಟ(೫೧) ಮತ್ತು ಮಂಜುನಾಥ ಗಣಪತಿ ಹೆಗಡೆ(೬೪), ಸರ್ಕುಳಿ ತಟ್ಟಿಕೈ ನಿವಾಸಿಗಳಾದ ದೇವರು ಸುಬ್ರಾಯ ಹೆಗಡೆ(೭೪) ಮತ್ತು ಜಯಂತ ಗಣಪತಿ ಹೆಗಡೆ(೬೪) ಹಾಗೂ ಶಿರಸಿ ಕುಳವೆ ನಿವಾಸಿ ಪ್ರವೀಣ ನರಸಿಂಹ ಭಟ್ಟ(೩೬) ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Brain surgery/ ರೋಗಿ ಕೊಳಲು ಊದುತ್ತಿರುವಾಗಲೇ ಶಸ್ತ್ರಚಿಕಿತ್ಸೆ !