ಭಟ್ಕಳ (Bhatkal) : ತಲೆಯ ದಿಂಬಿನ ಹತ್ತಿರ ಹಾಸಿಗೆಯ ಅಡಿಯಲ್ಲಿ ಇಟ್ಟಿದ್ದ ೪.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ (gold ornaments) ಕಳುವಾಗಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಕಳಿ ಹನುಮಂತ ದೇವಸ್ಥಾನದ ಎದುರುಗಡೆ ಇರುವ ತಾಜ್ ವಿಲ್ಲಾದಲ್ಲಿ ಈ ಕಳ್ಳತನ ನಡೆದಿದೆ. ಮಾ.೧೪ರಂದು ರಾತ್ರಿ ೧೧ರಿಂದ ಮರುದಿನ ಬೆಳಿಗ್ಗೆ ೧೦.೩೦ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿದೆ ಎಂದು ದೂರಲಾಗಿದೆ. ಈ ಕುರಿತು ತಜಮ್ಮುಲ್ ಹಸನ್ ಮೊಹಿದ್ದೀನ್ ಶೌಕತ್ ಅಸ್ಕೇರಿ (೪೮) ದೂರು ದಾಖಲಿಸಿದ್ದಾರೆ (case registered). ತಮ್ಮ ಅಜ್ಜಿ ಬಿ.ಬಿ.ಸಾರಾ ಮಲಗಿದ್ದ ಮನೆಯಲ್ಲಿ ಹಾಲ್ನಲ್ಲಿ ಇರುವ ಮಂಚದ ಮೇಲಿನ ಹಾಸಿಗೆಯ ಅಡಿಯಲ್ಲಿ ತಲೆಯ ದಿಂಬಿನ ಹತ್ತಿರ ಹಳೆಯದಾದ ೯೦ ಗ್ರಾಂ ಬಂಗಾರದ ಆಭರಣ ಇಡಲಾಗಿತ್ತು. ತಮ್ಮ ಮನೆಯ ಒಳಗಡೆ ಬಂದ ಕಳ್ಳರು ೪.೫೦ ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : Fraud Case/ ಬೆಂಗಳೂರಲ್ಲಿ ವಂಚಿಸಿದ ಆರೋಪಿಗಳು ಅಂಕೋಲಾದಲ್ಲಿ ಸೆರೆ