ಭಟ್ಕಳ (Bhatkal) : ಪಕ್ಕದ ಮನೆಯವರು ಮನೆಯೆದುರಿನ ರಸ್ತೆ ಮೇಲೆ ಎಸೆದಿದ್ದ ಕಸವನ್ನು ತೆಗೆಯಲು ಹೋದ ವ್ಯಕ್ತಿಗೆ ಕಸ ಎಸೆದವರೇ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಪುರವರ್ಗದ ೩ನೇ ಕ್ರಾಸ್ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಹಮೀದ್ ಉಮರ್ ಗಂಗಾವಳಿ (೪೨) ದೂರು ದಾಖಲಿಸಿದವರು. ಪಿರ್ಯಾದಿಯ ಪಕ್ಕದಮನೆಯಲ್ಲಿ ವಾಸವಾಗಿರುವ ತೌಸಿಪ್
ಸಲಾವುದ್ದೀನ ಜಬಾಲಿ, ಪತ್ನಿ ನೂರಾ, ಸಹೋದರ ಸಾದಾಬ್ ಜಬಾಲಿ, ಸಾದಾಬ್ ಪತ್ನಿ ಶಾಹಿಸ್ತಾ, ಅಪೀರಾ ಮಕ್ಬೂಲ್ ಮತ್ತು ತೌಸಿಫ್ ನ ಸಹೋದರಿ ಮಾರಿಯಾ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ : ಉದ್ಯಮಿ ಹತ್ಯೆ ಮಾಡಿದ್ದ ಸುಪಾರಿ ಹಂತಕರ ಬಂಧನ
ದೂರಿನಲ್ಲೇನಿದೆ? : ಪಿರ‍್ಯಾದಿಯ ಮನೆಯ ಪಕ್ಕದಲ್ಲಿಯೇ
ಆರೋಪಿತರು ವಾಸವಾಗಿದ್ದಾರೆ. ಇವರು ಯಾವಾಗಲೂ ಪಿರ‍್ಯಾದಿಯ ಮನೆಯ ಎದುರಿಗೆ ಇರುವ ರಸ್ತೆಯಲ್ಲಿ ಕಸ ಹಾಕುವುದು, ಕಲ್ಲು ಹಾಕುವುದು ಮಾಡುತ್ತಾ ಬಂದಿದ್ದಾರೆ. ಹಲವು ಬಾರಿ ಹೇಳಿದರೂ ಕೇಳದೆ ಆಗಾಗ ಜಗಳಕ್ಕೆ ಬರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆ.೨೫ರಂದು ಸಂಜೆ ೬ ಗಂಟೆ ಸುಮಾರಿಗೆ ತೌಸಿಫ್ ಎಂಬಾತ ರಸ್ತೆಯ ಮೇಲೆ ಕಸಕಡ್ಡಿ, ಕಲ್ಲು ಹಾಗೂ ಪ್ಲಾಸ್ಟಿಕನ್ನು ತಂದು ಹಾಕಿದ್ದರು. ಇದನ್ನು ನೋಡಿ ಪಿರ‍್ಯಾದಿಯುಈ ರೀತಿ ರಸ್ತೆಯ ಮೇಲೆ ಕಸಕಡ್ಡಿ, ಕಲ್ಲು ಹಾಕಿದರೆ ನಮಗೆ ಓಡಾಡಲು ತೊಂದರೆ ಆಗುತ್ತದೆ ಅಂತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತೌಸಿಫ್, ಕಸವನ್ನು ತೆಗೆಯಲು ಆಗುವುದಿಲ್ಲ. ಅದು ನಮ್ಮ ಜಾಗ. ನೀನು ಏನಾದರು ಮುಟ್ಟಿದರೆ ನಿನ್ನನ್ನು ಬಿಡುವುದಿಲ್ಲ ಅಂತಾ ಹೇಳಿದ್ದಾರೆ.
ಇದನ್ನೂ ಓದಿ : ಲಂಚ ಪಡೆದ ಪಟ್ಟಣ ಪಂಚಾಯತ್ ಸದಸ್ಯಗೆ ಜೈಲು ಶಿಕ್ಷೆ
ಓಡಾಡಲು ತೊಂದರೆ ಆಗುತ್ತಿದ್ದರಿಂದ ಅಲ್ಲಿದ್ದ ಕಸವನ್ನು ಪಿರ್ಯಾದಿ ತೆಗೆಯಲು ಹೋದಾಗ ಆರೋಪಿತ ಏಳು ಜನರು ಕೂಡಿ ಅವಾಚ್ಯ ಶಬ್ದಗಳಿಂದ ಪಿರ್ಯಾದಿಗೆ ಬೈಯ್ದಿದ್ದಾರೆ. ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ಗಟ್ಟಿಯಾಗಿ ಹಿಡಿದುಕೊಂಡು ಎಲ್ಲರೂ ಹೊಡೆದಿದ್ದಾರೆ. ಮೈ ಮೇಲಿನ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಆರೋಪಿ ತೌಸಿಫ್ ಹಿಂದಿನಿಂದ ಬಂದು ಸಲಿಕೆಯನ್ನು ತಂದು ಪಿರ‍್ಯಾದಿಯ ತಲೆಯ ಮೇಲೆ ಹೊಡೆದು ಗಾಯಪಡಿಸಿದ್ದಾರೆ. ಇವತ್ತು ಬಿಟ್ಟಿದ್ದೇವೆ. ಇನ್ನೊಮ್ಮೆ ತಮ್ಮ ಸುದ್ದಿಗೆ ಬಂದರೆ ಕೊಂದು ಹಾಕುತ್ತೇವೆ ಅಂತಾ ಧಮಕಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಐ.ಆರ್.ಬಿ. ಕಾಮಗಾರಿ ಮಾಹಿತಿ ನೀಡದಿದ್ದರೆ ಹೋರಾಟ