ಹೊನ್ನಾವರ (Honavar) : ಮನೆಯ ಬಚ್ಚಲು ಕೋಣೆಯಲ್ಲಿ ಕೃಷಿಕನೋರ್ವ ಲುಂಗಿಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ನಗರೆ ಗ್ರಾಮದ ಉತ್ತಮ ನಾರಾಯಣ ನಾಯ್ಕ (೫೫) ಸಾವಿಗೆ ಶರಣಾದವರು. ನಿನ್ನೆ ಅ.೪ರಂದು ಮಧ್ಯಾಹ್ನ ೧೨.೩೦ರಿಂದ ೧.೩೦ರ ನಡುವಿನ‌ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯ ಬಚ್ಚಲು ಕೋಣೆಯಲ್ಲಿ ಅಳವಡಿಸಿದ ಆಂಗಲ್ ಪಟ್ಟಿಗೆ ಲುಂಗಿಯನ್ನು ಕಟ್ಟಿ ಇನ್ನೊಂದು
ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ನೇಣು ಬಿಗಿದುಕೊಂಡಿದ್ದಾರೆ‌.

ಇದನ್ನೂ ಓದಿ : ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು

ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಮಗ
ಸುಬ್ರಹ್ಮಣ್ಯ ದೂರು ದಾಖಲಿಸಿದ್ದಾರೆ (case registered). ಪ್ರಕರಣ ದಾಖಲಿಸಿಕೊಂಡಿರುವ ಹೊನ್ನಾವರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Navaratri Utsav/ ಮೊದಲ ದಿನವೇ ೧.೩೪ ಲಕ್ಷಕ್ಕೂ ಹೆಚ್ಚು ಭಕ್ತರು