ಭಟ್ಕಳ (Bhatkal): ಎರಡು ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ತಡೆದು ವಾಹನಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಿಸಿದ್ದಾರೆ (cattle protection). ಈ ಸಂದರ್ಭ ಐವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಒಟ್ಟು ೮ ಜನರ ವಿರುದ್ಧ ಪೊಲೀಸರು ಪ್ರಕರಣ (complaint) ದಾಖಲಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ (National Highway) ೬೬ರಲ್ಲಿ ಶಿರಾಲಿ ಚೆಕ್ ಪೋಸ್ಟ್ ಸಮೀಪ ಈ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಯಲ್ವಡಿಕವೂರ ನಿವಾಸಿ ರಮೇಶ ನಾಯ್ಕ, ಹಾವೇರಿ (Haveri) ಜಿಲ್ಲೆಯ ಹಿರೇಕೆರೂರ (Hirekerur) ತಾಲೂಕಿನ ಚಾಲಕರಾದ ಚಿಕ್ಕೆರೂರ ಗ್ರಾಮದ ಕುಂಟಿಗುಡ್ಡ ನಿವಾಸಿ ಅಭಿಲಾಷ ರಮೇಶಸ್ವಾಮಿ ಹಿರೇಮಠ (೨೭) ಮತ್ತು ಯಮ್ಮಿಗನೂರ ನಿವಾಸಿ ಸುನೀಲ ಉಮೇಶಪ್ಪ ಮೇಗಳಮನಿ (೨೮), ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಮಳವಳ್ಳಿಯ ರಾಘವೇಂದ್ರ ನಾಗರಾಜಪ್ಪ ಹಡಪದ (೩೫) ಹಾಗೂ ಯಮ್ಮಿಗನೂರಿನ ಮತ್ತೋರ್ವ ಪ್ರಶಾಂತ ವಿದ್ಯಾಶಂಕರ ಹತ್ತಿ (೩೦) ದಾಳಿ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದಲ್ಲದೆ ಸೊರಬ (Soraba) ತಾಲೂಕಿನ ಅಮೀರ ಮೆಹಬೂಬ ಅಲಿ, ಭಟ್ಕಳದ ನಿವಾಸಿಗಳಾದ ಮೆಹಬೂಬ ಅಲಿ ಮತ್ತು ಮುತಾಲೀಫ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : bike collision/ ಬೈಕುಗಳ ಡಿಕ್ಕಿಗೆ ನಾಲ್ವರಿಗೆ ಗಾಯ
ಆರೋಪಿತರು ಹೊನ್ನಾವರ (Honnavar) ಕಡೆಯಿಂದ ಭಟ್ಕಳ ಕಡೆಗೆ ಬುಲೆರೋ ಪಿಕಪ್ ಮತ್ತು ಅಶೋಕ ಲೈಲ್ಯಾಂಡ ದೋಸ್ತ ವಾಹನದಲ್ಲಿ ೪ ಜಾನುವಾರುಗಳನ್ನು ಸಾಗಾಟ ಮಾಡಲು ಪರವಾನಿಗೆ ಪಡೆಯದೆ ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಮಾ.೯ರಂದು ಮಧ್ಯಾಹ್ನ ೧೨.೪೫ರ ಸುಮಾರಿಗೆ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ವಾಹನಗಳು ಸಾಗುತ್ತಿದ್ದಾಗ ಪೊಲೀಸರು ತಡೆಹಿಡಿದಿದ್ದರು (cattle protection). ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Women’s cabin/ ಮಹಿಳಾ ಸುರಕ್ಷತಾ ಕ್ಯಾಬಿನ್ ಉದ್ಘಾಟನೆ