ಭಟ್ಕಳ : ನಾಮಧಾರಿ ಸಮಾಜ ಹಾಗೂ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ವ್ಯಾಪ್ತಿಯ ನಾಮಧಾರಿ ಸಮಾಜದ ನೇತೃತ್ವದಲ್ಲಿ ಚಾತುರ್ಮಾಸ್ಯ(Chathurmasya) ಕಾರ್ಯಕ್ರಮ ನಡೆಯುತ್ತಿದೆ. ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುಮಾಸ್ಯ ಕಾರ್ಯಕ್ರಮ ಶನಿವಾರ ೭ನೇ ದಿನ ಪೂರ್ಣಗೊಳಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶನಿವಾರದಂದು ಕರಿಕಲ್ ಧ್ಯಾನ ಮಂದಿರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಚಾತುರ್ಮಾಸ್ಯದ ಮೆರಗನ್ನು ಹೆಚ್ಚಿಸಿದರು. ಶನಿವಾರದಂದು ಬೆಳಿಗ್ಗೆ ಮುರುಡೇಶ್ವರ ಭಾಗದ ಹಿರೇದೋಮಿ ಹಾಗೂ ತೂದಳ್ಳಿ ನಾಮಧಾರಿ ಕೂಟದಿಂದ ಭಕ್ತರು ಮೆರವಣಿಗೆಯ ಮೂಲಕ ಹೊರೆ ಕಾಣಿಕೆಯನ್ನು ತಂದು ತಮ್ಮ ಒಂದು ದಿನದ ಸೇವೆಯಲ್ಲಿ ಪಾಲ್ಗೊಂಡಿದ್ದರು. ಕೂಟದ ಪ್ರಮುಖರು ಹಾಗೂ ಭಕ್ತರು ಸ್ವಾಮೀಜಿಗಳ ಪಾದಪೂಜೆಯನ್ನು ನೆರವೇರಿಸಿದರು. ನಂತರ ಸ್ವಾಮೀಜಿಗಳಿಂದ ಮಂತ್ರಾಕ್ಷತೆ ಪಡೆದರು.
ವಿಡಿಯೋ ಸಹಿತ ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದ ಕಾಗೇರಿ
ಶಿರಾಲಿ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಧರ್ಮದರ್ಶಿಗಳು ಹಾಗೂ ಸದಸ್ಯರು, ನಿವೃತ್ತ ಡಿ.ಎಫ್.ಓ. ಉದಯ ನಾಯ್ಕ ಕುಮಟಾ, ಮುರುಡೇಶ್ವರದ ನಿವೃತ್ತ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ವಿ.ಜೆ.ನಾಯ್ಕ ಸೇರಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.
ಇದನ್ನೂ ಓದಿ : ಹಾಡುವಳ್ಳಿಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ
ಈ ಸಂದರ್ಭದಲ್ಲಿ ಭಟ್ಕಳದ ಪ್ರತಿಷ್ಠಿತ ಎಂ.ಜಿ.ಎಂ. ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಈರಪ್ಪ ಗರ್ಡಿಕರ, ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿ ಸ್ವಾಮೀಜಿಗಳ ಚಾತುಮಾಸ್ಯ (Chathurmasya) ಕಾರ್ಯಕ್ರಮಕ್ಕೆ ೫೦ ಸಾವಿರ ರೂ. ಗುರುಕಾಣಿಕೆ ನೀಡಿದರು. ಗೊಂಡ ಸಮಾಜದ ಅಬಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪ್ರಮುಖರು, ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರು ಆಗಮಿಸಿ ಹೊರೆಕಾಣಿಕೆ ಅರ್ಪಿಸಿ ಸ್ವಾಮೀಜಿಗಳಿಂದ ಮಂತ್ರಾಕ್ಷತೆ ಪಡೆದರು.
ಇದನ್ನೂ ಓದಿ : ಒಳಚರಂಡಿ ಅವಾಂತರ, ಬಾವಿ ನೀರು ಕಲುಷಿತ
ಶ್ರೀರಾಮನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ೫ ಸಾವಿರಕ್ಕೂ ಅಧಿಕ ಮಂದಿ ಈ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.