ಭಟ್ಕಳ: ೫೪ ವರ್ಷಗಳಷ್ಟು ಸುದೀರ್ಘ ಕಾಲ ಸಮರ್ಥ ಆಡಳಿತ ನಡೆಸಿದ ರಾಣಿ ಚೆನ್ನಭೈರಾದೇವಿಯವರನ್ನು (ChennabhairaDevi) ಮರೆತಿರುವುದು ಅತ್ಯಂತ ಖೇದಕರ ಎಂದು ಶಿರವಂತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕ ಲೋಕರಾಜ ಜೈನ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಮರೆತು ಹೋದ ಮಹಿಳಾ ನಾಯಕಿ- ರಾಣಿ ಚೆನ್ನಭೈರಾದೇವಿ’ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುತ್ತ್ತಾ, ರಾಣಿ ಚೆನ್ನಭೈರಾದೇವಿಯ (ChennabhairaDevi) ಅನೇಕ ಮಾಹಿತಿಗಳನ್ನು ನೀಡಿದರು. ಭಟ್ಕಳ, ಹೊನ್ನಾವರ ಮತ್ತು ಮಿರ್ಜಾನ ಬಂದರುಗಳ ಮೂಲಕ ಹದಿನಾಲ್ಕು ದೇಶಗಳೊಂದಿಗೆ ವ್ಯಾಪಾರ ವ್ಯವಹಾರವನ್ನು ನಡೆಸುತ್ತಾ ಸುಮಾರು ೭,೦೦೦ ರಿಂದ ೮,೦೦೦ ಕ್ವಿಂಟಲ್ ಕಾಳು ಮೆಣಸನ್ನು ಕೇವಲ ಭಟ್ಕಳ ಬಂದರಿನಿಂದ ರಫ್ತು ಮಾಡುತ್ತಾ ಕಾಳು ಮೆಣಸಿನ ರಾಣಿ ಎಂದು ಪ್ರಸಿದ್ಧರಾದರು ಎಂದು ಹೇಳಿದರು.
ಇದನ್ನು ಓದಿ: Biker injured/ ಟ್ಯಾಂಕರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರಗೆ ಗಾಯ
ಪ್ರಾಂಶುಪಾಲ ಡಾ ವಿರೇಂದ್ರ ವಿ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು, ಪ್ರಶಿಕ್ಷಣಾರ್ಥಿಗಳಾದ ಮಂಜುಳಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಯಶ್ರೀ ಸ್ವಾಗತಿಸಿದರು. ಚೈತನ್ಯಾ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ವಂದಿಸಿದರು. ಕಾವ್ಯಾ ಮತ್ತು ಲಿಡಿಯಾ ನಿರೂಪಿಸಿದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ, ಉಪನ್ಯಾಸಕಿ ನಿಶ್ಚಿತಾ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!!



