ಹೊನ್ನಾವರ : ಮನೆಯಂಗಳದಲ್ಲಿ ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಬಾಲಕ ಮೃತಪಟ್ಟ(child died) ದಾರುಣ ಘಟನೆ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ಇಂದು (ಜುಲೈ ೨೫) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೀನುಗಾರ ನಾಗರಾಜ ಉಪ್ಪಾರ ಅವರ ೨ ವರ್ಷ ೨ ತಿಂಗಳ ಪ್ರಾಯದ ಮಗು ಆಕಾಶ ಮೃತ ದುರ್ದೈವಿ. ಈತ
ಇಂದು ಬೆಳಗ್ಗೆ ೮-೩೦ ಗಂಟೆಯ ಸುಮಾರಿಗೆ ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ. ಆಟವಾಡುತ್ತ ಮನೆಯ ಪಕ್ಕದಲ್ಲಿರುವ ಜೇಮ್ಸ್ ಫರ್ನಾಂಡೀಸ್ ಎಂಬುವರ ಜಾಗಕ್ಕೆ ಹೋಗಿದ್ದಾನೆ. ಆಗ ಜಾಗದಲ್ಲಿರುವ ನೆಲಸಮ ಬಾವಿಯ ಹತ್ತಿರ ಹೋದವನು ಆಕಸ್ಮಿಕ ಕಾಲು ಜಾರಿ
ಬಾವಿಯ ನೀರಿನಲ್ಲಿ ಬಿದ್ದಿದ್ದಾನೆ.
ಇದನ್ನೂ ಓದಿ : ಹೆಬ್ಬಾಳ ಸೇತುವೆ ಮುಳುಗಡೆ; ಹೊರನಾಡು ಸಂಪರ್ಕ ಕಡಿತ
ತಕ್ಷಣ ಸ್ಥಳೀಯರು ಮಗುವನ್ನು ಬಾವಿಯಿಂದ ಎತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು ಆಗಲೇ ಮಗು ಮೃತಪಟ್ಟಿರುವುದಾಗಿ (child died) ಘೋಷಿಸಿದ್ದಾರೆ.