ಗೋವಾ (Goa) : ಇಲ್ಲಿನ ಪೋಂಡಾದ (Ponda) ಟಿಸ್ಕ್-ಉಸ್ಗಾವೊದಲ್ಲಿ (Tisk-Usgao) ನಡೆದ ಸಮಾರಂಭದಲ್ಲಿ ೧೭ ವರ್ಷದ ಬಾಲಕಿಯನ್ನು ವಿವಾಹವಾದ ಬಾಲ್ಯವಿವಾಹ (Child Marriage) ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಂಡಾ ಪೊಲೀಸರು ನಿನ್ನೆ ಗುರುವಾರ ಅಪ್ರಾಪ್ತ ಬಾಲಕಿಯ ತಂದೆ ಮತ್ತು ವರ ಸೇರಿದಂತೆ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರ್ನಾಟಕದ (Karnataka) ಕಾರವಾರ (Karwar) ಮೂಲದ ಶಿಕ್ಷಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೋಂಡಾ ಪೊಲೀಸರ ಪ್ರಕಾರ, ಈ ವರ್ಷದ ಏಪ್ರಿಲ್ನಲ್ಲಿ ಟಿಸ್ಕ್-ಉಸ್ಗಾವೊದಲ್ಲಿ ಈ ಬಾಲ್ಯ ವಿವಾಹ ನಡೆದಿತ್ತು. ಆರೋಪಿಗಳನ್ನು ಕರ್ನಾಟಕದ ಹಾವೇರಿ (Haveri) ನಿವಾಸಿಗಳಾದ ಏಸುನಾಥ ರಾಮಣ್ಣ ಲಕಂಪುರ (೨೮), ಯಲ್ಲವ್ವ ಲಕಂಪುರ (೪೦), ಟಿಸ್ಕ್-ಉಸ್ಗಾವ್ ನಿವಾಸಿಗಳಾದ ಲಕ್ಷ್ಮಣ ವಡ್ಡರ (೬೦), ಭಾಸ್ಕರ್ ವಡ್ಡರ (೪೦) ಮತ್ತು ಕಾರವಾರದ ಲಕ್ಷ್ಮಿ ರಾಜ ವಡ್ಡರ (೩೪) ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿ ಅಪ್ರಾಪ್ತಳೆಂದು ಗೊತ್ತಿದ್ದರೂ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : Bhatkal/ ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ
ಈ ಬಗ್ಗೆ ಆರಂಭದಲ್ಲಿ ಕಾರವಾರದಲ್ಲಿ ದೂರು ದಾಖಲಾಗಿತ್ತು. ಆದರೆ ಟಿಸ್ಕ್-ಉಸ್ಗಾವೊದಲ್ಲಿ ಅಪರಾಧ ನಡೆದಿದೆ ಎಂದು ತಿಳಿದ ಪೊಲೀಸರು ಪೋಂಡಾ ಪೊಲೀಸರಿಗೆ ದೂರನ್ನು ವರ್ಗಾಯಿಸಿದ್ದರು. ೨೦೦೬ರ ಬಾಲ್ಯವಿವಾಹ (child marriage) ಕಾಯ್ದೆಯ ಸೆಕ್ಷನ್ ೯, ೧೦, ೧೧ರ ಅಡಿಯಲ್ಲಿ ಪೊಲೀಸರು ಬಾಲ್ಯವಿವಾಹದ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ : Konkani Parishat/ ಕುಮಟಾದ ಅರುಣ ಉಭಯಕರ ಉತ್ತರಾಧಿಕಾರಿ ಆಯ್ಕೆ