ಭಟ್ಕಳ (Bhatkal) : ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸುವ ಉದ್ದೇಶದಿಂದ ತಾಲೂಕಿನ ಮುಂಡಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧ರಲ್ಲಿ “ಮಕ್ಕಳ ಸಂತೆ” (Childrens Market) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಜೊತೆಗೆ ವ್ಯಾಪಾರ ಜ್ಞಾನ, ವ್ಯವಹಾರಿಕ ಜ್ಞಾನ, ಪ್ರಾಪಂಚಿಕ ಜ್ಞಾನ ಹಾಗೂ ಲಾಭ ನಷ್ಟ ಗಳ ಜ್ಞಾನ ವನ್ನು ಮಕ್ಕಳು ಸ್ವತಃ ಪ್ರಾಯೋಗಿಕವಾಗಿ ಕಂಡುಕೊಳ್ಳುವ ಉದ್ದೇಶದಿಂದ “ಮಕ್ಕಳ ಸಂತೆ” (Childrens Market) ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜೇಶ ನಾಯ್ಕ ಉದ್ಘಾಟಿಸಿದರೆ, ಅಂಗಡಿ ಮಳಿಗೆಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಶಿಧರ ನಾಯ್ಕ ಉದ್ಘಾಟಿಸಿದರು.
ಇದನ್ನೂ ಓದಿ : ಜೋಯಿಡಾ ಮೂಲದ ಪತ್ರಕರ್ತನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಸಂತೆಯಲ್ಲಿ ವೈವಿಧ್ಯಮಯ ಅಂಗಡಿಗಳು ರಾರಾಜಿಸಿದ್ದವು. ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಜ್ಯೂಸ್ ಸೆಂಟರ್, ಸನಾತನ ಸಂಸ್ಥೆಯ ಅಂಗಡಿ, ಸೌಂದರ್ಯ ಸಾಮಗ್ರಿಗಳ ಅಂಗಡಿ, ಪಾನಿಪುರಿ ಸ್ಟಾಲ್ ಗಳು, ಬುಕ್ ಸ್ಟಾಲ್, ವೈವಿಧ್ಯಮಯ ಆಟಗಳ ಅಂಗಡಿ, ಬೇಕರಿ ತಿನಿಸುಗಳ ಅಂಗಡಿಗಳು, ವಿಶೇಷ ತಿನಿಸುಗಳ ಅಂಗಡಿಗಳು, ಆರೋಗ್ಯಕರ ಪಾನೀಯಗಳ ಅಂಗಡಿ, ಎಳನೀರು ಅಂಗಡಿ, ಜನರಲ್ ಸ್ಟೋರ್ ಹೀಗೆ ಒಟ್ಟೂ ೨೮ ಅಂಗಡಿಗಳು ಕಂಡುಬಂದವು. ಮಕ್ಕಳು ಸಂಭ್ರಮ ಸಂತೋಷದಿಂದ ತಮ್ಮ ತಮ್ಮ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ವ್ಯಾಪಾರದ ಹಾಗೂ ವ್ಯವಹಾರದ ಅಭೂತಪೂರ್ವ ಅನುಭವವನ್ನು ಪಡೆದುಕೊಂಡರು.
ಇದನ್ನೂ ಓದಿ : ಭಟ್ಕಳದ ಕುವರನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಈ ವೇಳೆ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಪವಿತ್ರಾ ಮೊಗೇರ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಜಗದೀಶ ಆಚಾರಿ, ಮುಖ್ಯಾಧ್ಯಾಪಕಿ ಪಾರ್ವತಿ ದೇವಡಿಗ, ಸಹಶಿಕ್ಷಕರು, ಶಾರದೋತ್ಸವ ಸಮಿತಿ ಪದಾಧಿಕಾರಿಗಳು, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಯುವಕ ಮಂಡಳದ ಪದಾಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ, ಪಾಲಕ-ಪೋಷಕರು ಹಾಜರಿದ್ದರು. ಶಿಕ್ಷಕಿ ರಾಜಶ್ರೀ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಗಣೇಶ ಹೆಗಡೆ ನಿರೂಪಿಸಿದರು. ಶಿಕ್ಷಕಿ ಅಕ್ಷತಾ ನಾಯ್ಕ ವಂದಿಸಿದರು.
ಇದನ್ನೂ ಓದಿ : ಸಂದೀಪ ಸಾಗರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ