ಭಟ್ಕಳ (Bhatkal): ತಾಲೂಕಿನ ಕಾಯ್ಕಿಣಿಯ ಕೋಟದಮಕ್ಕಿ ಸ .ಹಿ.ಪ್ರಾ.ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ (Science day) ಹಾಗೂ ಗಣಿತ ಮೇಳ (Math Fair) ನಿಮಿತ್ತ ಮಕ್ಕಳ ಸಂತೆ (Childrens Market) ಕಾರ್ಯಕ್ರಮ ಸಮುದಾಯದ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮನ್ನು ಅತಿಥಿಗಳು ಉದ್ಘಾಟಿಸಿದರು. ಸಭಾಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಧಾಕರ ದೇವಡಿಗ, ಉಪಾಧ್ಯಕ್ಷ ನಾಗೇಶ ಆಚಾರಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ದೇವಡಿಗ, ಲಯನ್ಸ ಕ್ಲಬ್ ಅಧ್ಯಕ್ಷ ವಿಶ್ವನಾಥ ಮಡಿವಾಳ, ಹಳೆಯ ವಿದ್ಯಾರ್ಥಿ ಸಂಘದ ಅನಿಲ ದೇವಡಿಗ, ಮಹೇಶ ಶೆಟ್ಟಿ, ಜಗದೀಶ ದೇವಡಿಗ ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕಿ ತ್ರಿವೇಣಿ ನಾಯ್ಕ ಸ್ವಾಗತಿಸಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಗಣಿತ ಮೇಳದ (Childrens Market) ಉದ್ದೇಶ ಹಾಗೂ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : Good Deed/ ಹೀಗೊಂದು ಪುಣ್ಯ ಕಾರ್ಯ…