ಭಟ್ಕಳ (Bhatkal) : ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ (Childrens day) ಪ್ರಯುಕ್ತ ಚುಟುಕು ಕ್ರೀಡಾ ಹಬ್ಬ-2k24 (sports festival) ಕಾರ್ಯಕ್ರಮ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಭಾಭವನದಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್ತಿನ ಜಾಲಿ ಘಟಕ ಅಧ್ಯಕ್ಷ ಉಮೇಶ್ ಶ್ರೀಧರ ನಾಯ್ಕ ಉದ್ಘಾಟಿಸಿದರು.  ರಾಷ್ಟ್ರಮಟ್ಟದ ಕ್ರೀಡಾಪಟು ಅಕ್ಷಯ ಮಾದೇವ ಗೊಂಡ ಕ್ರೀಡಾಂಗಣ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ನಿನ ವಸಂತ ಎಂ. ನಾಯ್ಕ ವಹಿಸಿದ್ದರು. ಅತಿಥಿಗಳಾಗಿ ಆನಂದ ಆಶ್ರಮ ಶಾಲೆಯ ಶಿಕ್ಷಕಿ ಮೂಕಾಂಬಿಕ ಲಕ್ಷ್ಮಣ ಮೊಗೇರ, ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸದಸ್ಯರಾದ ಶ್ರೀನಾಥ್ ವಿ.ನಾಯ್ಕ, ಸುರೇಂದ್ರ ಎ.ಆಚಾರ್ಯ, ವೆಂಕಟ್ರಮಣ ಡಿ. ನಾಯ್ಕ,ಮುಂತಾದವರು ಉಪಸ್ಥಿರಿದ್ದರು. ಮಕ್ಕಳ ದಿನಾಚರಣೆ (Childrens day) ಪ್ರಯುಕ್ತ ನಡೆದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ :  ಉಸ್ತುವಾರಿಯಿಂದ ವಸತಿ ನಿಲಯಗಳ ಪರಿಶೀಲನೆ